ಸಾಮಾಜಿಕ
3 ವರ್ಷದ ಮಗು ಸಾವು: ಪಕ್ಕದ ಮನೆಯವರ ಸಂಶಯಕ್ಕೆ ಹೂತಿದ್ದ ಶವ ಹೊರಕ್ಕೆ!

Views: 172
ಕನ್ನಡ ಕರಾವಳಿ ಸುದ್ದಿ: 3 ವರ್ಷದ ಮಗುವಿನ ಸಾವಿನ ಬಗ್ಗೆ ಸಂಶಯ ಇದ್ದು ತನಿಖೆ ಮಾಡಬೇಕು ಎಂಬ ತಾಯಿ ಕೋರಿಕೆಯ ಮೇರೆಗೆ ಹೂತಿದ್ದ ಶವವನ್ನು ಪರೀಕ್ಷೆಗಾಗಿ ಹೊರತೆಗೆಯುವ ಪ್ರಕ್ರಿಯೆ ಜಿಲ್ಲೆಯ ನವಲಗುಂದ ತಾಲ್ಲೂಕಿನ ಯಮನೂರಿನ ಸ್ಮಶಾನಗಟ್ಟಿಯಲ್ಲಿ ನಡೆದಿದೆ.
ತಾಲ್ಲೂಕಿನ ಯಮನೂರ ಗ್ರಾಮದ ವೆಂಕಪ್ಪ ಪರಸಪ್ಪ ಮರಿಸಿದ್ದಣ್ಣವರ ಮಗ ಯಲ್ಲಪ್ಪ ವೆಂಕಪ್ಪ ಮರಿಸಿದ್ದಣ್ಣವವರ 3 ವರ್ಷದ ಮಗು ನವೆಂಬರ್ 8ರಂದು ಶುಕ್ರವಾರ ಮೃತಪಟ್ಟಿತ್ತು, ಇಂದು ಬೆಳಿಗ್ಗೆ ಹೂತಿದ್ದ ಶವವನ್ನು ಪರೀಕ್ಷೆಗಾಗಿ ಹೊರತೆಗೆಯುವ ಪ್ರಕ್ರಿಯೆ ಜಿಲ್ಲೆಯ ನವಲಗುಂದ ತಾಲ್ಲೂಕಿನ ಯಮನೂರಿನ ಸ್ಮಶಾನಗಟ್ಟಿಯಲ್ಲಿ ನಡೆಯುತ್ತಿದೆ. ತಹಶೀಲ್ದಾರ್ ಸುಧೀರ್ ಸಾಹುಕಾರ್, ಪಿಎಸ್‌ಐ ಜನಾರ್ದನ ಭಟ್ರಳ್ಳಿ ಸ್ಥಳದಲ್ಲಿ ಇದ್ದಾರೆ. ಪಕ್ಕದ ಮನೆಯವರು ಕೊಲೆ ಮಾಡಿರಬಹುದು ಎಂದು ತಾಯಿ ಶಾಂತಾ ಅವರು ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ಇನ್‌ಕ್ವೆಸ್ಟ್ ಪಂಚನಾಮೆ, ಪರೀಕ್ಷೆ ಶವ ಹೊರತೆಗೆಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.






