ವಯೋಮಿತಿ ಮೀರುತ್ತಿರುವ 2,500 ಉಪನ್ಯಾಸಕರು ಬೀದಿಪಾಲು. ನೊಂದ ಉಪನ್ಯಾಸಕರಿಗೆ ನ್ಯಾಯ ನೀಡಿ
ನೇಮಕ ಅಧಿಸೂಚನೆ ಹೊರಡಿಸಿದ 2 ವಷ೯ಗಳ ಬಳಿಕ ಮಾನದಂಡವೇ ಬದಲು | ಉದ್ಯೋಗದ ಆಸೆಯಲ್ಲಿದ್ದ ಅಭ್ಯಥಿ೯ಗಳಿಗೆ ನಿರಾಸೆ | ಹಲವು ವಷ೯ಗಳಿಂದ ಬೋದಿಸಿದ ಉಪನ್ಯಾಸಕರಿಗೆ ಅನ್ಯಾಯ

Views: 106
ರಾಜ್ಯ ಸಕಾ೯ರ ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗದ ಆಸೆ ತೋರಿಸಿ ತಣ್ಣೀರು ಎರಚಿದೆ. ಖಾಸಗಿ ಅನುದಾನಿತ ಪ್ರಥಮ ದಜೆ೯ ಕಾಲೇಜು ಉಪನ್ಯಾಸಕರ ನೇಮಕಕ್ಕೆ ಸರಕಾರ ಅಧಿಸೂಚನೆ ಹೊರಡಿಸಿ ಮಧ್ಯಂತರದಲ್ಲಿ ನೇಮಕಕ್ಕೆ ಮಾನದಂಡವನ್ನು ಬದಲಿಸಿದ್ದರಿಂದ ಅಜಿ೯ ಹಾಕಿದವರಿಗೆ ಅನ್ಯಾಯವಾಗಿದೆ.
2022ರಲ್ಲಿ ಕೆ.ಇ.ಎ ಅವರು ಹಿಂದೆ ಸಹಾಯಕ ಪ್ರಾಧ್ಯಾಪಕರ ಉದ್ಯೋಗಕ್ಕಾಗಿ ಅರ್ಜಿ ಆಹ್ವಾನಿಸಿದಾಗ ಎಲ್ಲಿಯೂ ಪಿ.ಹೆಚ್.ಡಿ ಬಗ್ಗೆ ಪ್ರಸ್ತಾಪ ಮಾಡಿಲ್ಲ.ಕೇವಲ ನೆಟ್/ಸೆಟ್ ಇದ್ದರೆ ಸಾಕು ಎಂದಿದ್ದಾರೆ. ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಪಿ.ಹೆಚ್.ಡಿಯನ್ನು ಕಡ್ಡಾಯ ಮಾಡಿಲ್ಲ.ಆದರೆ ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಹುದ್ದೆ ಭರ್ತಿಗೆ ಕಾಲೇಜು ಇಲಾಖೆಯವರು ತಮ್ಮದೇ ಮಾನದಂಡದ ಮೇಲೆ ಒಂದು ಸುತ್ತೋಲೆ ಹೊರಡಿಸಿದೆ. ಇಷ್ಟರವರೆಗೆ ದಾಖಲೆಗಳನ್ನು ಹಿಡಿದು ಖರ್ಚು ವೆಚ್ಚಗಳನ್ನು ಮಾಡಿಕೊಂಡು ಜಂಟಿ ನಿರ್ದೇಶಕರ ಕಛೇರಿ, ಎಂ.ಎಸ್ ಬಿಲ್ಡಿಂಗ್, ಕಾಲೇಜು ಶಿಕ್ಷಣ ಇಲಾಖೆ ಎಂದು ಚಪ್ಪಲಿ ಸವೆಸಿ ಕೊಂಡು ಓಡಾಡಿದ ಉಪನ್ಯಾಸಕರು ಕಷ್ಟವನ್ನು ಎದುರಿಸುವಂತೆ ಮಾಡಿದೆ.2015ರ ಗೈಡ್ಲೈನ್ ಪ್ರಕಾರ ಎಂದು ಪಿ.ಹೆಚ್.ಡಿಗೆ 25 ಅಂಕ ಮಾಡಿದೆ. ಈಗಾಗಲೇ ನೆಟ್.ಸೆಟ್ ಮಾಡಿಕೊಂಡು ಹತ್ತಾರು ವರ್ಷಗಳ ಕಾಲ ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ 2,500 ಉಪನ್ಯಾಸಕರು ಬೀದಿಗೆ ಬರುವಂತೆ ಇಲಾಖೆ ಮಾಡಿದೆ. ಹೆಚ್ಚಿನ ಉಪನ್ಯಾಸಕರ ವಯೋಮಿತಿಯಿಂದ ಮೀರುವ ಸಂದರ್ಭದಲ್ಲಿದ್ದಾರೆ. ಕೆ.ಇ.ಎ ಮಾಡದ ಮಾನದಂಡ ಖಾಸಗಿ ಅನುದಾನಿತ ಕಾಲೇಜುಗಳಿಗೆ ಏಕೆ ? ಎನ್ನುವ ಪ್ರಶ್ನೆ ಈಗ ಎದುರಾಗಿದೆ. ಈ ಹಿಂದೆಯಿದ್ದ ಆಡಳಿತ ಪಕ್ಷವು ಇದಕ್ಕೆ ನೇರ ಗುರಿಯಾಗುತ್ತದೆ. ಇದು ಒಂದು ರೀತಿಯಲ್ಲಿ ಪ್ರಾಧ್ಯಾಪಕರ ಆನ್ಲೈನ್ ಆಯ್ಕೆ ಆದಂತಾಗಿದೆ. ಇಂಟರ್ವ್ಯೂವ್ ಗೆ ಕೇವಲ 10 ಅಂಕವಾಗಿದೆ. ಒಬ್ಬನ ಕಮ್ಯುನಿಕೇಶನ್ ಸ್ಕಿಲ್ ಕುರಿತು ಅಧ್ಯಯನ ನಡೆಸಲು ಸಂದರ್ಶನ ಬಹಳ ಮುಖ್ಯ. ಪಿ.ಹೆಚ್.ಡಿಯೇ ಮುಖ್ಯ ಅಲ್ಲ. ಇದರಲ್ಲಿ ಪಿ.ಹೆಚ್.ಡಿ ಪಡೆದವನೇ ನೇರವಾಗಿ ಉದ್ಯೋಗ ಪಡೆದುಕೊಳ್ಳುತ್ತಾನೆ. ಮೊದಲು ಖಾಸಗಿ ಅನುದಾನಿತ ಕಾಲೇಜಿನ ಆಡಳಿತ ಮಂಡಳಿಗೆ ಕನಿಷ್ಟ 50 ಅಂಕಗಳನ್ನು ಸಂದರ್ಶನಕ್ಕೆ ನೀಡಿತ್ತು. ಆದರೆ ಈಗ ಕಾಲೇಜು ಆಡಳಿತ ಮಂಡಳಿಗೆ ಸಂದರ್ಶನಕ್ಕೆ 10 ಅಂಕ ಮಾತ್ರ ನೀಡಿದೆ. ಇದು ಕಾಲೇಜು ಶಿಕ್ಷಣ ಇಲಾಖೆಯವರ ಏಕಾಏಕಿ ನಿರ್ಧಾರವಾಗಿದೆ. ಈ ನಿಯಮವನ್ನು ಬದಲಿಸದಿದ್ದರೆ ಉಪನ್ಯಾಸಕರು ದೀರ್ಘವಾದ ಸಮಸ್ಯೆ ಎದುರಿಸುವಂತಾಗಿದೆ. ಪ್ರತಿಭಟನೆಗೆ ಇಳಿಯುವಂತಾಗಿದೆ. ಈ ನೀತಿ ಸಂಹಿತೆಯ ಹಿಂದಿನ ದಿನ 29.03.2023 ರಂದು ಈ ಸೂಚನೆಯನ್ನು ಹೊರ ಹಾಕಿದೆ. ಇದು ಸರ್ಕಾರ ಮತ್ತು ಆಡಳಿತ ಮಂಡಳಿಯ ಪ್ರಶ್ನೆ ಅಲ್ಲ. ಅದರ ನಡುವೆ ಹುದ್ದೆ ಖಾಯಂ ಆಗುತ್ತದೆಂದು ನಿರೀಕ್ಷೆಯಲ್ಲಿರುವ ಬಡ ಉಪನ್ಯಾಸಕರ ಜೀವನದ ಸಮಸ್ಯೆಯಾಗಿದೆ. ಯಾವುದೇ ಸರ್ಕಾರದ ನೀತಿ ಜನರ ಸಾಮಾನ್ಯರಿಗೆ ತೊಂದರೆ ಉಂಟು ಮಾಡಿ ಇಕ್ಕಟ್ಟಿನಲ್ಲಿ ಸಿಕ್ಕಿಸ ಬಾರದು. ಈ ಸಂದರ್ಭದಲ್ಲಿ ಸರ್ಕಾರ ಹೇಗೆ ನೊಂದ ಉಪನ್ಯಾಸಕರಿಗೆ ನ್ಯಾಯ ಒದಗಿಸಿ ಕೊಡುವ ಕೆಲಸವನ್ನು ಮಾಡುತ್ತದೆನ್ನುವುದನ್ನು ಕಾದು ನೋಡಬೇಕಾಗಿದೆ.