ಶಿಕ್ಷಣ

ಡಿ.24 ರಂದು ವಕ್ವಾಡಿ ಸ.ಹಿ.ಪ್ರಾ ಶಾಲಾ ಶತಮಾನೋತ್ಸವ ಸಂಭ್ರಮ: ಮಾದರಿ ಶಾಲೆಯಾಗಿ ರೂಪುಗೊಳಿಸುವಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಿ 

Views: 206

ಮಾನ್ಯ ವಿದ್ಯಾಭಿಮಾನಿಗಳೇ,

ಕುಂದಾಪುರ: ತಾಲೂಕಿನ ವಕ್ವಾಡಿಯಲ್ಲಿ ಸುಮಾರು 103 ವರ್ಷದ ಇತಿಹಾಸ ಹೊಂದಿರುವ  ನಮ್ಮೂರ ಶಾಲೆ ಎನ್ನುವ ಹೆಗ್ಗಳಿಕೆ ಇದೆ. ಕೋವಿಡ್ ಹಾಗೂ ಇತರೆ ಕಾರಣದಿಂದ ಶತಮಾನೋತ್ಸವ ಆಚರಣೆ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಶತಮನೋತ್ಸವವನ್ನು ಅದ್ದೂರಿಯಾಗಿ ಆಚರಿಸುವ ಹಂಬಲದೊಂದಿಗೆ ಶತಮಾನೋತ್ಸವ ಸಮಿತಿ ರಚಿಸಲಾಗಿದ್ದು, 2023 ರ ಡಿಸೆಂಬರ್ 24 ರಂದು ಶತಮಾನೋತ್ಸವ ಆಚರಿಸುವುದೆಂದು ನಿರ್ಣಯಿಸಲಾಗಿರುತ್ತದೆ.

ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಿರುವ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕುಂಠಿತವಾಗುತ್ತಿರುವುದು ಮನಗಂಡು  ನಮ್ಮೂರಿನ ಶಾಲೆಯನ್ನು ಉಳಿಸಿಕೊಳ್ಳುವ ಮತ್ತು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ದೃಷ್ಟಿಯಿಂದ ಆಂಗ್ಲ ಮಾಧ್ಯಮ ಪ್ರಾರಂಭಿಸುವರೇ ಅನಿವಾರ್ಯವಾಗಿದ್ದು, 2022-23 ನೇ ಸಾಲಿನಿಂದ ಎಲ್ ಕೆ‌ ಜಿ ಪ್ರಾರಂಭ ಮಾಡಲಾಗಿದ್ದು, ಸರ್ಕಾರದಿಂದ ಅನುಮೋದನೆ ದೊರೆತಿರುತ್ತದೆ.(LKG,UKG ಗೆ ಸರ್ಕಾರದಿಂದ ಅನುಮೋದನೆ ದೊರೆತ ಕುಂದಾಪುರ ತಾಲ್ಲೂಕಿನ ಎರಡು ಸರಕಾರಿ ಶಾಲೆಗಳಲ್ಲಿಯೇ ಒಂದು ಶಾಲೆ ಎನ್ನುವ ಹೆಗ್ಗಳಿಕೆ ನಮ್ಮ ಶಾಲೆಯದ್ದು.

ಶಾಲೆಯ ಸಂಪೂರ್ಣ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಹಾಕಿದ್ದು , ವಕ್ವಾಡಿಯ ಶಾಲೆಯನ್ನು ಮಾದರಿ ಶಾಲೆಯಾಗಿ ರೂಪುಗೊಳಿಸುವಲ್ಲಿ ಸಂಪೂರ್ಣವಾಗಿ ಆಂಗ್ಲ ಮತ್ತು ಕನ್ನಡ ಮಾಧ್ಯಮವನ್ನು ಜೊತೆಯಾಗಿರಿಸಿಕೊಂಡು  ವಕ್ವಾಡಿಯ ಮಕ್ಕಳೆಲ್ಲಾ ಒಂದೇ ಸೂರಿನಡಿ ವಿದ್ಯಾಭ್ಯಾಸ ಮಾಡಲು ಅನುಕೂಲ ಮಾಡಿಕೊಡಬೇಕಿದೆ.ಇದಕ್ಕಾಗಿ ಶಾಲಾಭಿವೃದ್ದಿಗೆ ಸುಮಾರು 75 ಲಕ್ಷದ ಕ್ರಿಯಾಯೋಜನೆಯನ್ನು ತಯಾರಿಸಲಾಗಿದೆ.

ಶಾಲಾಭಿವೃದ್ಧಿಗೆ ಸರ್ಕಾರ,ಶಾಸಕರು, ಸಂಸದರು , ಜಿಲ್ಲಾ ಪಂಚಾಯತ್ , ತಾಲೂಕು ಪಂಚಾಯತ್ ಹಾಗೂ ಗ್ರಾಮಪಂಚಾಯತ್ ಅನುದಾನಗಳನ್ನು ಪಡೆಯುವುದರ ಜೊತೆಗೆ ದಾನಿಗಳ ನೆರವು ಅತೀ ಮುಖ್ಯವಾಗಿದ್ದು ನಿಮ್ಮೆಲ್ಲರ ಸಹಾಯವನ್ನು ಯಾಚಿಸುತ್ತಿದ್ದೇವೆ.

ವಿದ್ಯಾಧಾನ ಶ್ರೇಷ್ಠದಾನವಾಗಿದ್ದು, ನಮ್ಮೂರ ವಿದ್ಯಾರ್ಥಿಗಳಿಗೆ ಮಾಡುವ ವಿದ್ಯಾದಾನದಲ್ಲಿ ನೀವೂ ಭಾಗಿಗಳಾಗಿ. ಹನಿಹನಿ ಕೂಡಿದರೆ ಹಳ್ಳ ಎನ್ನುವಂತೆ ನೀವು ಕೊಡುವ ದೇಣಿಗೆಯಿಂದ ಶಾಲೆಯು ಬೆಳಗಲಿ, ಮಕ್ಕಳ ಪಾಲಿನ ಬೆಳಕಾಗಲಿ. ಶತಮಾನ ಕಂಡ ಶಾಲೆಯ ಶತಮಾನೋತ್ಸವ ಶಾಶ್ವತವಾಗಿ ನೆನಪಿರುವಂತಾಗಿ ಮಾಡೋಣ. 25000 ಕ್ಕಿಂತಲೂ ಹೆಚ್ಚು ನೆರವು ನೀಡಿದ ದಾನಿಗಳ ಹೆಸರುಗಳನ್ನು ಶಾಲೆಯ ಗೋಡೆಗಳಲ್ಲಿ ಶಾಶ್ವತವಾಗಿ ಕಾಪಿಡುವ ಕೆಲಸವನ್ನು ಮಾಡಲಾಗುವುದು.

ವಂದನೆಗಳೊಂದಿಗೆ,

( ಅಧ್ಯಕ್ಷರು & ಸರ್ವ ಸದಸ್ಯರು )

ಶತಮಾನೋತ್ಸವ ಸಮಿತಿ

ಅಧ್ಯಕ್ಷರು &ಸರ್ವ ಸದಸ್ಯರು

ಹಳೆ ವಿದ್ಯಾರ್ಥಿಗಳ ಸಂಘ

ಅಧ್ಯಕ್ಷರು &ಸರ್ವ ಸದಸ್ಯರು

SDMC

ಮುಖ್ಯ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದ ವಕ್ವಾಡಿ

ಹಣ ಕಳುಹಿಸುವವರಿಗೆ ಬ್ಯಾಂಕ್ ವಿವರ

SHATHAMANOTHSAVA SAMITHI GOVT HPS

A/C NO. 81840100014268

IFSC : BARBOVJSALV

 

Related Articles

Back to top button