ಶಿಕ್ಷಣ

ಹೋಂವರ್ಕ್ ಮಾಡುತ್ತಿದ್ದ ಯುಕೆಜಿ ಮಗು ಕೆಳಗೆ ಬಿದ್ದು ಪೆನ್ನು ಚುಚ್ಚಿ ಸಾವು

Views: 253

ಮಂಚದ ಮೇಲೆ ಕೂತು ಹೋಂವರ್ಕ್ ಮಾಡುತ್ತಿರುವ  ಮಗು ಆಟವಾಡುತ್ತಾ ಮಂಚದಿಂದ ಕೆಳಗೆ  ಬೀಳುವಾಗ ಕೈಯಲ್ಲಿರುವ ಪೆನ್ನಿನ ತುದಿ ಮಗುವಿನ ತಲೆಯೊಳಗೆ ಚುಚ್ಚಿಕೊಂಡು ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ಬಾಲಕಿಯ ಹೆಸರು ರಿಯಾಂಶಿಕಾ.

ತೆಲಂಗಾಣದ ಭದ್ರಾಚಲಂ ನಗರದಲ್ಲಿನ ಈ ಮಗು ಯುಕೆಜಿ ಓದುತ್ತಿರುವ ಈ ಪುಟ್ಟ ಕಂದಮ್ಮ ಎಂದಿನಂತೆ ಅಂದು ಕೂಡ ಶಾಲೆಗೆ ಖುಷಿ-ಖುಷಿಯಿಂದ ಬಂದಿದೆ. ನಂತರ ಎಂದಿನಂತೆ ಹೋಂವರ್ಕ್ ಮುಗಿಸಲು ಮಂಚದ ಮೇಲೆ ಕೂತಿದೆ. ಮಕ್ಕಳು ಹೋಂವರ್ಕ್ ಮಾಡಲು  ಮಗು ಕೂಡ ಆಟವಾಡುತ್ತಾ ಹೋಂವರ್ಕ್ ಮಾಡುವಾಗ ಮಂಚದಿಂದ ಕೆಳಗೆ ಬಿದ್ದಿದೆ. ಆದರೆ ಬೀಳುವಾಗ ಮಗುವಿನ ಕೈಯಲ್ಲಿರುವ ಪೆನ್ನಿನ ತುದಿ ಮಗುವಿನ ತಲೆಯೊಳಗೆ ಚುಚ್ಚಿಕೊಂಡಿದೆ.

ಆ ಮಗುವನ್ನು ಮನೆಯವರು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರು, ಸರ್ಜರಿ ಮಾಡಿದರೂ ಮಗು ಬದುಕಿಳಿಯಲಿಲ್ಲ, ಮಗುವಿನ ಭವಿಷ್ಯ ಬೆಳಗಬೇಕಾಗಿದ್ದ ಮಗುವಿನ ಜೀವ ತೆಗೆದಿದ್ದು ಮಾತ್ರ ವಿಧಿಯ ಕ್ರೂರ ಆಟ ಎಂದು ಹೇಳದೆ ಇನ್ನೇನು ಹೇಳಲು ಸಾಧ್ಯ

 

 

Related Articles

Back to top button