ಸಾಂಸ್ಕೃತಿಕ
ಹೊಸ ಜೀವನಕ್ಕೆ ಕಾಲಿಡಲು ಸಜ್ಜಾದ ಲಕ್ಷ್ಮೀ ನಿವಾಸ ಸೀರಿಯಲ್ ನಟಿ “ಚಂದನಾ ಅನಂತಕೃಷ್ಣ” ಹುಡುಗ ಯಾರು?

Views: 142
ಕನ್ನಡ ಕರಾವಳಿ ಸುದ್ದಿ: ಲಕ್ಷ್ಮೀ ನಿವಾಸ ಸೀರಿಯಲ್ ನಟಿ, ಬಿಗ್‌ಬಾಸ್ ಖ್ಯಾತಿಯ ಚಂದನಾ ಅನಂತಕೃಷ್ಣಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಇದೇ ತಿಂಗಳು ನಟಿ ಚಂದನಾ ಅವರು ಸಪ್ತಪದಿ ತುಳಿಯುತ್ತಿದ್ದಾರೆ.

ಚಂದನಾ ಅನಂತಕೃಷ್ಣ ಅವರು ಬಿಗ್‌ಬಾಸ್ ಸೀಸನ್-7, ಡ್ಯಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋಗಳ ಸ್ಪರ್ಧಿ ಆಗಿದ್ದರು. ಹಾಡು ಕರ್ನಾಟಕ ಸಿಂಗಿಂಗ್ ಶೋನಲ್ಲಿ ಚಂದನಾ ಆ್ಯಂಕರ್ ಆಗಿದ್ದರು.

ರಾಜಾರಾಣಿ, ಹೂಮಳೆ ಸೀರಿಯಲ್‌ನಲ್ಲಿ ನಟಿಸಿದ್ದ ನಟಿ ಚಂದನಾ ಅವರು ಸದ್ಯ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ.
ಗಾಯನದ ಮೂಲಕವೂ ರಂಜಿಸಿರುವ ನಟಿ ಚಂದನಾ ಅನಂತಕೃಷ್ಣ ಅವರು ಪ್ರತ್ಯಕ್ಷ್ ಎಂಬುವವರ ಜೊತೆ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ.






