ಇತರೆ

ಹೆಬ್ರಿ: ಉದ್ಯಮದಲ್ಲಿ ನಷ್ಟ, ಹೆಂಡತಿಯ ಮನೆಯಲ್ಲಿ ನೇಣಿಗೆ ಶರಣಾದ ಪತಿ 

Views: 202

ಕನ್ನಡ ಕರಾವಳಿ ಸುದ್ದಿ:ಉದ್ಯಮದಲ್ಲಿ ನಷ್ಟ ಹೊಂದಿದ್ದರಿಂದ ಹೆಂಡತಿ ಮನೆಯಲ್ಲಿ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಬೆಂಗಳೂರಿನಲ್ಲಿ ಹೊಟೇಲ್ ಉದ್ಯಮ ನಡೆಸಿಕೊಂಡಿದ್ದ ಹೆಬ್ರಿ ತಾಲೂಕು ಬೆಳ್ಳಂಜೆಯ ಸಂತೋಷ್ ಶೆಟ್ಟಿ (40) ಅವರು ಉದ್ಯಮದಲ್ಲಿ ನಷ್ಟ ಹೊಂದಿದ್ದರಿಂದ ಕಳೆದ ಮೂರು ತಿಂಗಳ ಹಿಂದೆ ಊರಿಗೆ ಬಂದು ನೆಲೆಸಿದ್ದರು.ಇತ್ತೀಚಿಗೆ ಕಾರ್ಕಳದ ಕಾರ್‌ಶೋ ರೂಂ ಒಂದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಡಿ. 11ರಂದು ಕೆಲಸಕ್ಕೆ ರಜೆ ಇರುವುದರಿಂದ ತನ್ನ ಪತ್ನಿ ಮನೆಯಾದ ಮಚ್ಚಟ್ಟು ಗ್ರಾಮದ ಹಂಚಿಕಟ್ಟೆಯ ಹೆಬ್ರಿ ಇಲ್ಲಿಗೆ ಬಂದಿದ್ದರು. ರಾತ್ರಿ ಊಟ ಮಾಡಿ ಮಲಗಿದ್ದ ಅವರು ಅಡುಗೆ ಮನೆಯ ಪಕ್ಕದ ಕೋಣೆಯಲ್ಲಿ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ಸುಷ್ಮಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!