ರಾಜಕೀಯ

ಹಾಸನದಲ್ಲಿ ಹರಿದಾಡ್ತಿರೋ ಅಶ್ಲೀಲ ದೃಶ್ಯಗಳ ನೆರಳು ಈಗ ಎಂಪಿ ಗೆಸ್ಟ್ ಹೌಸ್ ಮೇಲೂ ಶಂಕೆ..!

Views: 92

ಎಂಪಿ ಗೆಸ್ಟ್ ಹೌಸ್ ನಲ್ಲಿಯೂ ದೌರ್ಜನ್ಯ ನಡೆದಿರೋ ಆರೋಪ ಕೇಳಿಬಂದಿದೆ. ಈ ಮಧ್ಯೆ ಎಸ್ಐಟಿ ಸಂತ್ರಸ್ತೆಯರ ವಿಚಾರಣೆ ನಡೆಸುತ್ತಿದ್ದು, ಕೆಲವರು ಮಾಹಿತಿ ನೀಡಲು ಹಿಂದೇಟು ಹಾಕಿದ್ದಾರಂತೆ. ಇತ್ತ ಪ್ರಜ್ವಲ್ ಹಳೆ ಡ್ರೈವರ್ ಕಾರ್ತಿಕ್ ನಿಂದಲೂ ಎಸ್ಐಟಿ ಅಧಿಕಾರಿಗಳು ಕೆಲ ಮಾಹಿತಿ ಕಲೆ ಹಾಕಿದ್ದಾರೆ.

ಹಾಸನದಲ್ಲಿ ಹರಿದಾಡ್ತಿರೋ ಅಶ್ಲೀಲ ದೃಶ್ಯಗಳ ನೆರಳು ಈಗ ಎಂಪಿ ಗೆಸ್ಟ್ ಹೌಸ್ ಮೇಲೂ ಬಿದ್ದಿದೆ. ಸಂಸದರ ಗೆಸ್ಟ್ ಹೌಸ್ ನಲ್ಲಿಯೂ ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ಎಸ್ಐಟಿಗೆ ಮಾಹಿತಿ ಬಂದಿದೆ. ಅಶ್ಲೀಲ ದೃಶ್ಯಗಳು ಎಂಪಿ ಕ್ವಾರ್ಟರ್ಸ್ನಲ್ಲೂ ಅಶ್ಲೀಲ ದೃಶ್ಯಗಳು ಸೆರೆಯಾಗಿರೋ ಶಂಕೆ ವ್ಯಕ್ತವಾಗ್ತಿದೆ.

ಕೇಸ್ ತನಿಖೆ ಚುರುಕುಗೊಳಿಸಿರೋ ಎಸ್ಐಟಿ ತಂಡ, ಸಂತ್ರಸ್ತೆಯರ ಗುರುತು ಪತ್ತೆ ಮಾಡಿ ರಸಹ್ಯವಾಗಿ ವಿಚಾರಣೆ ನಡೆಸಿದೆ. ಈವರೆಗೂ ಒಟ್ಟು 10 ಸಂತ್ರಸ್ತ ಮಹಿಳೆಯರ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ನಿನ್ನೆ ಐವರು ಸಂತ್ರಸ್ತೆಯರು ಎಸ್ಪಿ ಸೀಮಾ ಲಾಟ್ಕರ್, ಡಿವೈಎಸ್ಪಿ ಪ್ರಭಾವತಿ ಮುಂದೆ ಹಾಜರಾಗಿದ್ದರು. ಎಸ್ಐಟಿ ಮುಂದೆ ಐವರು ಸಂತ್ರಸ್ತೆಯರು ಹಾಜರಾಗಿ ಹೇಳಿಕೆ ದಾಖಲಿಸಿದ್ರು. ಸದ್ಯ ಎಸ್ಐಟಿ ತಂಡ ಎಲ್ಲಾ ಸಂತ್ರಸ್ತೆಯರನ್ನು ಗೌಪ್ಯವಾಗಿ ವಿಚಾರಣೆಗೊಳಪಡಿಸಿದೆ. ಮತ್ತೊಂದೆಡೆ ಕೆಲ ಸಂತ್ರಸ್ತೆಯರು ಎಸ್ಐಟಿಗೆ ಮಾಹಿತಿ ನೀಡಲು ಹಿಂದೇಟು ಹಾಕಿದ್ದಾರಂತೆ

ದೂರುದಾರೆ ಹೊರತುಪಡಿಸಿ ಉಳಿದವರು ಯಾವುದಕ್ಕೂ ರೆಸ್ಪಾನ್ಸ್ ಮಾಡುತ್ತಿಲ್ಲ. ವಿಡಿಯೋದಲ್ಲಿರುವ ಮಹಿಳೆರನ್ನ ಸಂಪರ್ಕಿಸಲು SIT ಯತ್ನಿಸ್ತಿದ್ದು, ಎಷ್ಟೇ ಪ್ರಯತ್ನ ಪಟ್ಟರೂ ಸಂತ್ರಸ್ತೆಯರು ಪ್ರತಿಕ್ರಿಯಿಸುತ್ತಿಲ್ಲ. ಸಂತ್ರಸ್ತೆಯರು ಏನು ಹೇಳಲ್ಲ, ಏನು ಕೇಳಬೇಡಿ. ನಾವೇನ್ ದೂರು ಕೊಟ್ಟಿಲ್ಲ, ನಮ್ಮನ್ನು ಯಾಕೆ ಎಳೆದು ತರ್ತಿರಿ. ನಮ್ಮನ್ನ ನಮ್ಮ ಪಾಡಿಗೆ ಬಿಟ್ಟುಬಿಡಿ ಅಂತ ಹೇಳ್ತಿದ್ದಾರಂತೆ. ಸದ್ಯ ದೂರುದಾರೆ ಸಂತ್ರಸ್ತೆಯ ಮಾಹಿತಿ ಆಧರಿಸಿ ಮಾತ್ರ ತನಿಖೆ ನಡೆಸಲಾಗ್ತಿದೆ. ಅಶ್ಲೀಲ ವಿಡಿಯೋ ಕೇಸ್ ಸಂಬಂಧ ಪೆನ್ಡ್ರೈವ್ ಜನ್ಮಜಾಲಾಡ್ತಿರೋ ಎಸ್ಐಟಿ ತಂಡ ವಿಡಿಯೋಗಳ ಫಸ್ಟ್ ಕಾಪಿ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

ಪ್ರಜ್ವಲ್ ಹಳೆ ಡ್ರೈವರ್ ಕಾರ್ತಿಕ್ ಬಳಿಯಿಂದ ಎಸ್ಐಟಿ ಮೊದಲ ಕಾಪಿಯ ಎರಡು ಪೆನ್ಡ್ರೈವ್ ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ವೇಳೆ ವಿಡಿಯೋ ಶೇರ್ ಆದ ಬಗ್ಗೆ ಕಾರ್ತಿಕ್  ಎಳೆಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದಾನೆ. ಸಂತ್ರಸ್ತೆಯರು ಹೇಳಿಕೆ ನೀಡೋಕೆ ಹಿಂದೇಟು ಹಾಕ್ತಿದ್ದು, ಎಸ್ಐಟಿ ಅಧಿಕಾರಿಗಳು ಎಲ್ಲಾ ಅಯಾಮಾಗಳಲ್ಲೂ ತನಿಖೆ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

Related Articles

Back to top button
error: Content is protected !!