ಸಾಂಸ್ಕೃತಿಕ

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್..! ಕಿರಿಕ್ ಚೆಲುವೆ ಸಂಯುಕ್ತಾ ಹೆಗ್ಡೆ 

Views: 147

ಕನ್ನಡ ಕರಾವಳಿ ಸುದ್ಧಿ: ಕಿರಿಕ್ ಪಾರ್ಟಿ ಸಿನಿಮಾ ಯಶಸ್ಸಿನ ನಂತರ  ಸಂಯುಕ್ತಾ ಆನಂತರ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದರು. ಆನಂತರ ಬರೀ ಅನಗತ್ಯ ವಿಚಾರಗಳಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿದ್ದ ಸಂಯುಕ್ತಾ ಸದ್ಯಕ್ಕೆ ಬೀಚ್ ನಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ.

ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಬಂದವರು ಸಂಯುಕ್ತಾ ಹೆಗ್ಡೆ. ಆದರೆ ಆ ನಂತರ ಚಿತ್ರಕ್ಕಿಂತ ಹೆಚ್ಚು ಇವರು ಸದ್ದು ಮಾಡಿದ್ದು ವಿವಾದಗಳಿಂದ ಬಿಕಿನಿಯಲ್ಲಿ ಕಾಣಿಸಿಕೊಂಡು, ಟ್ರೋಲಿಗರಿಗೆ ತಾಂಬುಲವೂ ಆದ ಸಂಯುಕ್ತಾ ಹೆಗ್ಡೆ ಸದ್ಯ ತೆಂಗಿನ ಮರ ಏರಿ ಕುಳಿತುಕೊಂಡಿದ್ದಾರೆ.

ಮೊದಲಿಂದ ದುಬೈ, ಅಬುದಾಭಿ, ಗೋವಾ ಎಂದು ದೇಶ ವಿದೇಶ ಸುತ್ತಾಡುತ್ತಾ ಬಂದ ಸಂಯುಕ್ತಾ ಹೆಗಡೆ ಸದ್ಯ ತಮ್ಮ ಪ್ರವಾಸದ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬಾಲಿಯಲ್ಲಿ ಬದುಕಿನ ಅಮೂಲ್ಯವಾದ ಕ್ಷಣಗಳನ್ನು ಕಳೆದಿದ್ದಾರೆ. ಎಂಜಾಯ್ ಮಾಡಿದ್ದಾರೆ. ಆ ಪೈಕಿ ಸಂಯುಕ್ತಾ ತೆಂಗಿನ ಮರ ಏರಿ ಕುಳಿತ ಫೋಟೋ ಸದ್ಯಕ್ಕೆ ಎಲ್ಲರ ಗಮನ ಸೆಳೆಯುತ್ತಿದೆ.

ಸಂಯುಕ್ತಾ ಹೆಗ್ಡೆ ತೆಂಗಿನ ಮರವೇರಿ ಕುಳಿತ ಈ ಫೋಟೋಗೆ ತರಹೇವಾರಿ ಅಭಿಪ್ರಾಯಗಳು ವ್ಯಕ್ತವಾಗಿವೆ. ಕೆಲವರು ತುಂಬಾನೇ ಕ್ಯೂಟ್ ಆಗಿ ಕಾಣುತ್ತಿದ್ದೀರಾ ಎಂದರೆ, ಇನ್ನೂ ಕೆಲವರು ಮುದ್ದಾದ ಕೋತಿಯೆಂದಿದ್ದಾರೆ. ಇನ್ನೂ.. ಸಂಯುಕ್ತಾ ಅವರನ್ನು ಮೊದಲಿಂದ ಹಿಂಬಾಲಿಸಿಕೊಂಡು ಬಂದ ಅನೇಕ ಸಿನಿ ರಸಿಕರು ತುಂಬಾ ಹಾಟ್ ಆಗಿ ಕಾಣುತ್ತಿದ್ದೀರಾ ಎಂದು ಕೂಡ ಕಾಮೆಂಟ್ ಮಾಡಿದ್ದಾರೆ.

ಈ ಫೋಟೋ ಜೊತೆ ಸಂಯುಕ್ತಾ ಹೆಗಡೆ ಇನ್ನೂ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆ ಫೋಟೋಗಳು ಕೂಡ ಅನೇಕರ ಕಣ್ಮನ ಸೆಳೆಯುತ್ತಿವೆ. ಸಂಯುಕ್ತಾ ಹೆಗ್ಡೆ ಅವರ ಅಭಿಮಾನಿಗಳ ಹೃದಯವನ್ನು ಗೆಲ್ಲುತ್ತಿವೆ.

 

Related Articles

Back to top button
error: Content is protected !!