ರಾಜಕೀಯ

ಸೊಂಟದಲ್ಲಿ ಗನ್ ಇಟ್ಟುಕೊಂಡು ಸಿಎಂಗೆ ಹಾರ : ಭದ್ರತಾ ವೈಫಲ್ಯಕ್ಕೆ ವ್ಯಾಪಕ ಖಂಡನೆ

Views: 84

ಬೆಂಗಳೂರು, ಲೋಕಸಭೆ ಚುನಾವಣಾ  ಪ್ರಚಾರದ ವೇಳೆ ಸಿಎಂ ಸಿದ್ದರಾಮಯ್ಯ ಅವರು ಸೋಮವಾರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಪರ ಪ್ರಚಾರ ಮಾಡುತ್ತಿದ್ದು, ಈ ವೇಳೆ ವ್ಯಕ್ತಿಯೊಬ್ಬ ಸೊಂಟದಲ್ಲಿ ಗನ್ ಇಟ್ಟುಕೊಂಡು ತೆರೆದ ವಾಹನದಲ್ಲಿ ತೆರಳುತ್ತಿದ್ದ ಸಿದ್ದರಾಮಯ್ಯ, ಅಭ್ಯರ್ಥಿಗೆ ಹಾರ ಹಾಕಿದ್ದು. ಈ ವಿಡಿಯೋ ಎಲ್ಲಾ  ಕಡೆ ವೈರಲ್‌ ಆಗುತ್ತಿದ್ದು, ಈ ಬಗ್ಗೆ  ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ.

ಇನ್ನು ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿರೋಧ ಪಕ್ಷಗಳು ಕಾಂಗ್ರೆಸ್‌ ವಿರುದ್ಧ ಕೆಂಡಕಾರುತ್ತಿದ್ದಾರೆ.

ಇದಕ್ಕೆ ಬಿಜೆಪಿಯವರು  ಟೀಕೆ  ಮಾಡಿದ್ದು, ಮುಖ್ಯಮಂತ್ರಿ ಅವರಿಗೆ ಹಾರ ಹಾಕುವವರು, ಸನ್ಮಾನ ಮಾಡುವವರು ಗೂಂಡಾಗಳು, ರೌಡಿಗಳು, ಬೀದಿ ಪುಂಡರು ಎನ್ನುವುದು ಸಾಬೀತಾಗಿದೆ. ಇಷ್ಟುದಿನ ಹುಟ್ಟುಹಬ್ಬದ ಫ್ಲೆಕ್ಸ್‌ಗಳಲ್ಲಿ ಕಾಣಿಸುತ್ತಿದ್ದ ಗನ್ ಹಿಡಿದ ರೌಡಿಗಳು, ಇದೀಗ ಸಿಎಂ, ಡಿಸಿಎಂ ಅವರ ರ್‍ಯಾಲಿಗಳಲ್ಲಿ ರಾಜಾರೋಷವಾಗಿ ಗನ್ ಹಿಡಿದು ಹಾರ ಹಾಕಿ ಸಮಾಜದ ಮುಂದೆ ಪೋಸ್ ಕೊಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದೆ.

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕೂಡ ಗನ್ ಹಿಡಿದು ಈ ರೀತಿ ಪ್ರದರ್ಶನ ಮಾಡುತ್ತಿರುವುದು ಮತದಾರರನ್ನು  ಬೆದರಿಸುವುದಕ್ಕೆ ಎಂದು  ಕಾಂಗ್ರೆಸ್‌ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

Related Articles

Back to top button
error: Content is protected !!