ಸಿಗದ ಪರಿಷ್ಕೃತ ಪಠ್ಯ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ತೊಂದರೆ

Views: 0
ವಿವಾದಕ್ಕೆ ಕಾರಣವಾಗಿದ್ದ ಪಠ್ಯ ಪರಿಷ್ಕರಣಿ ಇದೀಗ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ತೊಂದರೆ ಉಂಟು ಮಾಡಿದೆ. ತಿದ್ದುಪಡಿಯಾಗಿರುವ ಕಿರುಹೊತ್ತಿಗೆ ಇನ್ನೂ ಮಕ್ಕಳಿಗೆ ತಲುಪಲಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.
ಬಿಜೆಪಿ ಸರ್ಕಾರದಲ್ಲಿರುವ ಸಂದರ್ಭದಲ್ಲಿ ಪಠ್ಯ ಪರಿಷ್ಕರಣಾ ಸಮಿತಿ ತಿದ್ದುಪಡಿ ಮಾಡಿದ್ದ ಪಠ್ಯವನ್ನು ಕೈ ಬಿಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ತಿದ್ದುಪಡಿ ಮಾಡಿ ಹೊಸದಾಗಿ ಕೆಲವನ್ನು ಸೇರಿಸಲಾಗಿತ್ತು. ಪರಿಷ್ಕೃತ ಕಿರು ಹೊತ್ತಿಗೆ ಶಿಕ್ಷಕರಿಗೆ ತಲುಪಿದೆ. ಮಕ್ಕಳಿಗೆ ಇನ್ನೂ ತಲುಪಲಿಲ್ಲ.
ಸರಕಾರ ತೆಗೆದು ಹಾಕಲಾದ ಪಠ್ಯದ ಬದಲಿಗೆ ಕಿರು ಹೊತ್ತಿಗೆಯಲ್ಲಿನ ಪಾಠವನ್ನು ಬೋಧಿಸಿ ಎಂದು ಆದೇಶ ನೀಡಿತು. ಆದರೆ, ಮಕ್ಕಳಿಗೆ ಕಿರು ಹೊತ್ತಿಗೆ ತಲುಪದೇ ಇರುವುದರಿಂದ ಓದುವುದಕ್ಕೆ ತುಂಬಾ ಕಷ್ಟವಾಗುತ್ತಿದೆ.
ಶಾಲೆಯ ಅನುದಾನದಲ್ಲಿ ಕಿರು ಹೊತ್ತಿಗೆಯನ್ನು ಜೆರಾಕ್ಸ್ ಮಾಡಿಸಿ ಮಕ್ಕಳಿಗೆ ಕಿರುಹೊತ್ತಿಗೆ ಕೊಡಿ ಎಂದು ಹೇಳಲಾಗುತ್ತದೆ. ಆದರೆ, ಶಾಲೆಗಳಿಗೆ ಈ ಅನುದಾನದ ಕೊರತೆ ಕಾಡುತ್ತಿದೆ.
ಕಿರುಹೊತ್ತಿಗೆಯನ್ನು ಶಿಕ್ಷಕರಿಗೆ ಮಾತ್ರ ನೀಡಲಾಗಿದ್ದು, ಮಕ್ಕಳಿಗೆ ನೀಡುವ ಪದ್ಧತಿ ಇಲ್ಲ ಇದರೊಂದಿಗೆ ಪರಿಷ್ಕರಣೆಗೊಂಡಿರುವ ಪಠ್ಯ ದೊಡ್ಡ ಪ್ರಮಾಣದಲ್ಲಿ ಇಲ್ಲ ಆದ್ದರಿಂದ ಹೊಸದಾಗಿ ಸೇರ್ಪಡೆಯಾಗಿರುವ ಪಠ್ಯದ ಕೆಲವು ಪುಟಗಳನ್ನು ವಿದ್ಯಾರ್ಥಿಗಳಿಗೆ ಜೆರಾಕ್ಸ್ ಮಾಡಿಕೊಡಬಹುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ