ಇತರೆ

ಸಾಸ್ತಾನದಲ್ಲಿ ವೃದ್ಧೆಯ ಆರೈಕೆಗೆ ಬಂದ ಹೋಂ ನರ್ಸ್ ನಿಂದ ಲಕ್ಷಾಂತರ ರೂಪಾಯಿ,ಚಿನ್ನ, ಪಾತ್ರೆ ಕದ್ದು ಪರಾರಿ 

Views: 294

ಕನ್ನಡ ಕರಾವಳಿ ಸುದ್ದಿ:ಸಾಸ್ತಾನ ಪಾಂಡೇಶ್ವರದಲ್ಲಿ ವೃದ್ಧೆಯ ಆರೈಕೆಗೆ ಬಂದ ಹೋಂ ನರ್ಸ್ ಲಕ್ಷಾಂತರ ರೂಪಾಯಿ, ಚಿನ್ನ, ಬೆಲೆಬಾಳುವ ಪಾತ್ರೆಗಳನ್ನು ಕದ್ದು ಪರಾರಿಯಾದ ಘಟನೆ ನಡೆದಿದೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧೆಯ ಆರೈಕೆಗೆ ಬಂದಿದ್ದ ಹೋಮ್ ನರ್ಸ್ ಓರ್ವಳು 7.50 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಪ್ರಿಯನ್ ಅವರ ವೃದ್ಧ ತಾಯಿಯನ್ನು ನೋಡಿಕೊಳ್ಳಲು ಏಜೆನ್ಸಿಯೊಂದರ ಮೂಲಕ ಹೋಂ ನರ್ಸ್ ಆಗಿ ಶೀಲಾಳನ್ನು ನೇಮಿಸಿದ್ದರು. ಆಕೆ ಮೇ 25ರಂದು ತನ್ನ ಮಗನಿಗೆ ಆರೋಗ್ಯ ಸಮಸ್ಯೆ ಇದೆ ಊರಿಗೆ ತೆರಳಿದ್ದಳು.ಮೇ 28ರಂದು ಸಿಪ್ರಿಯನ್ ಅವರು ಮನೆಯ ಕಪಾಟನ್ನು ತೆರೆದು ನೋಡಿದಾಗ ಡ್ರಾವರ್‌ನಲ್ಲಿದ್ದ 5 ಲಕ್ಷ ರೂ.ಗಳಿಗೂ ಹೆಚ್ಚು ಮೌಲ್ಯದ ಚಿನ್ನದ ಒಡವೆಗಳು, 1.10 ಲಕ್ಷ ಮೌಲ್ಯದ ಬಳೆ ಸೆಟ್, 78 ಸಾವಿರ ರೂ. ಬೆಲೆಬಾಳುವ ಪಾತ್ರೆಗಳು ಮತ್ತು 87 ಸಾವಿರ ರೂ.ನಗದನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿತ್ತು.

ಪ್ರಕರಣವನ್ನು ಮಾತುಕತೆ ಮೂಲಕ ಇತ್ಯರ್ಥಪಡಿಸಿ ಕೊಳ್ಳಲು ಪ್ರಯತ್ನಿಸಿದ್ದು ಆನಂದಪುರ ಪೊಲೀಸ್ ಠಾಣೆಗೆ ಕರೆಸಿ ಮಾತುಕತೆ ನಡೆಸಲಾಗಿತ್ತು.ಆಗಶೀಲಾ ತನ್ನ ಕೃತ್ಯದ ಬಗ್ಗೆ ತಪ್ರೊಪ್ಪಿಕೊಂಡಿದ್ದು ಅದರಲ್ಲಿ 1.30 ಲಕ್ಷ ರೂ. ಮೌಲ್ಯದ ಬ್ರಾಸ್ಕೆಟ್ ಹಾಗೂ 40 ಸಾವಿರ ರೂ. ನಗದನ್ನು ಹಿಂದಿರುಗಿಸಿದ್ದಳು. ಉಳಿದ ಹಣ ಮತ್ತು ಒಡವೆ ಹಿಂದಿರುಗಿಸಲು ಸಮಯವಕಾಶ ಮಾನವೀಯ ನೆಲೆಯಲ್ಲಿ ಸಿಪ್ರಿಯನ್ ಅವರು ಕಾಲಾವಕಾಶ ನೀಡಿದ್ದರು. ಆದರೆ ಆಕೆ ನೀಡಿದ ಗಡುವು ಕಳೆದು ಹಲವು ದಿನಗಳಾದರೂ ಯಾವುದೇ ಪ್ರತಿಕ್ರಿಯೆ ನೀಡದಿರುವ ಕಾರಣ ಸಿಪ್ರಿಯನ್ ಇದೀಗ ಕೋಟ ಪೊಲೀಸರಿಗೆ ದೂರು ನೀಡಿದ್ದಾರೆ.

Related Articles

Back to top button