ಸಂಬಂಧಿಕರ ಮನೆಗೆ ಕನ್ನ ಹಾಕಿ ಲಕ್ಷಾಂತರ ರೂ, ಮೌಲ್ಯದ ಚಿನ್ನಾಭರಣ ಕಳ್ಳತನ: ಇಂಜಿನಿಯರಿಂಗ್ ವಿದ್ಯಾರ್ಥಿನಿ ಸೆರೆ
Views: 84
ಕನ್ನಡ ಕರಾವಳಿ ಸುದ್ದಿ: ಸಂಬಂಧಿಕರ ಮನೆಗೆ ಕನ್ನ ಹಾಕಿ ಲಕ್ಷಾಂತರ ರೂ, ಮೌಲ್ಯದ ಚಿನ್ನಾಭರಣಗಳನ್ನು ಕದಿದ್ದ ಆರೋಪದ ಮೇರೆಗೆ ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮಾಂತರ ಠಾಣೆ ಪೊಲೀಸರು ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಯುವತಿ ಸೇರಿ ಇಬ್ಬರು ಕಳ್ಳರನ್ನು ಪೆರೇಸಂದ್ರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಚಿಕ್ಕಬಳ್ಳಾಪುರ ತಾಲೂಕು ಮಂಡಿಕಲ್ ಹೋಬಳಿಯ ಮುತ್ತುಕದಹಳ್ಳಿ ಗ್ರಾಮದ ಎಂಜನಿಯರಿಂಗ್ ಓದುತ್ತಿರುವ ಕುಮಾರಿ ರಮ್ಯಾ ಎಂ ಬಿನ್ ಮಂಜುನಾಥ (20) ಹಾಗೂ ಚಾಲಕನಾಗಿರುವ ಬಚ್ಚೇನಹಳ್ಳಿಯ ನಿವಾಸ 25 ವರ್ಷದ ವಿನಯ್ ಕುಮಾರ್ ಬಿ.ವಿ ಬಿನ್ ವೆಂಕಟೇಶಪ್ಪ ಎಂದು ಗುರುತಿಸಲಾಗಿದೆ.
ಮಂಡಿಕಲ್ ಹೋಬಳಿಯ ಮುತ್ತುಕದಹಳ್ಳಿ ಗ್ರಾಮದ ಪದ್ಮಾವತಮ್ಮ ಕೋಂ ಮಂಜುನಾಥ ಎಂಬುವರ ಮನೆಯಲ್ಲಿ ಕಳೆದ ವರ್ಷ ಅಂದರೆ 2025 ರ ಡಿಸೆಂಬರ್ 28 ರಂದು ತಮ್ಮ ಮನೆಯಲ್ಲಿ ಬೀರು ನೋಡಿದಾಗ ಚಿನ್ನಾಭರಣ ಕಳವು ಆಗಿದೆ ಎಂದು ಹೇಳಿ ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೇ ಡಿಸೆಂಬರ್ 18 ರಂದು ತಮ್ಮ ಮನೆಯಲ್ಲಿ ನಡೆದ ಮಾವನ ತಿಥಿ ಕಾರ್ಯಕ್ರಮಕ್ಕೆ ಬಂದಾಗ ಯಾರೋ ಎತ್ತಿಕೊಂಡು ಹೋಗಿದ್ದಾರೆಂದು ದೂರಿನಲ್ಲಿ ಪದ್ಮಾವತಮ್ಮ ವಿವರಿಸಿದ್ದರು






