ಕರಾವಳಿ

ಶಿರೂರಿನಲ್ಲಿ ನಾಪತ್ತೆಯಾಗಿರುವ ಲಾರಿ ಚಾಲಕನ ರಕ್ಷಣಾ ಕಾರ್ಯಾಚರಣೆಗೆ, ಸೇನೆಯ ನೆರವು ಕೋರಿದ ಕುಟುಂಬಸ್ಥರು!

Views: 129

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರೂರು ಬಳಿ ಸಂಭವಿಸಿದ ಭಾರಿ ಭೂಕುಸಿತದಲ್ಲಿ ಸಿಲುಕಿದ್ದ ಕೇರಳದ ಲಾರಿ ಚಾಲಕ ಅರ್ಜುನ್ ನಾಪತ್ತೆಯಾಗಿ ಐದು ದಿನ ಕಳೆದಿದ್ದು, ಅವರ ಕುಟುಂಬ ರಕ್ಷಣಾ ಕಾರ್ಯಾಚರಣೆಯಲ್ಲಿ ನಂಬಿಕೆ ಕಳೆದುಕೊಂಡಿದ್ದು, ಅವರನ್ನು ಹುಡುಕಲು ಸೇನೆ ನಿಯೋಜಿಸುವಂತೆ ಶನಿವಾರ ಕೋರಿದ್ದಾರೆ.

ರಕ್ಷಣಾ ಕಾರ್ಯಕ್ಕಾಗಿ ಸೇನೆ ನಿಯೋಜಿಸುವಂತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಪ್ರವಾಸೋದ್ಯಮ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಮನವಿ ಮಾಡಿದ್ದೇವೆ ಎಂದಿದ್ದಾರೆ.

ಶುಕ್ರವಾರ ಅರ್ಜುನ್ ಅವರ ಫೋನ್ ರಿಂಗ್ ಆಗುತಿತ್ತು .ಲಾರಿಯ ಜಿಪಿಎಸ್ ಟ್ರಾಕ್ಟರ್ ಸಿಗ್ನಲ್ ಸಿಗುತಿತ್ತು ಎಂದು ಅವರ ಕುಟುಂಬ ಹೇಳಿತ್ತು. ಈ ವಿಚಾರವಾಗಿ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಕುಟುಂಬದ ಪ್ರಕಾರ, ಸೋಮವಾರ ಅರ್ಜುನ್‌ನೊಂದಿಗೆ ಕೊನೆಯದಾಗಿ ಮಾತನಾಡಿದ್ದಾರೆ, ನಂತರ ಯಾವುದೇ ಸಂಪರ್ಕ ಸಿಕ್ಕಿಲ್ಲ. ಜುಲೈ 16 ರಂದು ಸಂಭವಿಸಿದ ಭೂಕುಸಿತ ಘಟನೆಯ ನಂತರ ಆರು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಭೂಕುಸಿತದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ

‘ಕರ್ನಾಟಕದವರು ರಕ್ಷಣಾ ಕಾರ್ಯಾಚರಣೆಯನ್ನು ಸರಿಯಾಗಿ ಮಾಡಲು ಸಾಧ್ಯವಾಗದಿದ್ದರೆ, ಅದನ್ನು ಸೇನೆ ಮಾಡಲಿ ಅಥವಾ ಕೇರಳದ ಜನರು ಅಲ್ಲಿಗೆ ಹೋಗಿ ಮಾಡಲಿ, ಕೇರಳದವರು ಸಲಕರಣೆ ಹೊಂದಿದ್ದು ಅಲ್ಲಿಗೆ ಹೋಗಿ ರಕ್ಷಣೆ ಮಾಡಲು ಸಿದ್ಧರಿದ್ದಾರೆ ಎಂದು ಅವರ ಕುಟುಂಬದವರು ಹೇಳಿದ್ದಾರೆ.

ಇದಕ್ಕೂ ಮುನ್ನಾ ಮಾತನಾಡಿದ ಅರ್ಜುನ್ ಅವರ ಸಹೋದರಿ, ನಾಪತ್ತೆ ವಿಷಯವನ್ನು ಕರ್ನಾಟಕ ಪೊಲೀಸರು ಜುಲೈ 16 ರಂದು ತಿಳಿಸಿದರು. ನಂತರ ಲಾರಿಯ ಜಿಪಿಎಸ್ ಸ್ಥಳ ಸೇರಿದಂತೆ ಹೆಚ್ಚಿನ ವಿವರಗಳನ್ನು ತಿಳಿಸಲಾಯಿತು. ಆದರೆ ಅರ್ಜನ್ ಎಲ್ಲಿದ್ದಾರೆ ಎಂಬುದರ ಬಗ್ಗೆ ಇಲ್ಲಿಯವರೆಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಇಷ್ಟು ವಿಳಂಬವಾದರೆ, ನಾವು ಯಾವ ಭರವಸೆ ಇಟ್ಟುಕೊಳ್ಳಬೇಕು. ಅಲ್ಲಿ ಅವರಿಗೆ ಅಗತ್ಯ ಸೌಲಭ್ಯಗಳಿಲ್ಲದಿದ್ದರೆ. ಎಲ್ಲಿ ಲಭ್ಯವಿದೆಯೋ ಅಲ್ಲಿಂದ ತರಬೇಕಿತ್ತು ಎಂದು ಹೇಳಿದರು.

 

 

Related Articles

Back to top button
error: Content is protected !!