ರಾಜಕೀಯ

ಶಿರಹಟ್ಟಿ ಕ್ಷೇತ್ರಕ್ಕೆ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ 1 ಕೋಟಿ ರೂ.ವಂಚನೆ: ಹಾಲಾಶ್ರೀ ವಿರುದ್ಧ ಮತ್ತೊಂದು ದೂರು 

Views: 1

ಅಭಿನವ ಹಾಲಶ್ರೀ ಮೇಲೆ ಮತ್ತೊಂದು ದೂರು ದಾಖಲಾಗಿದೆ. ಟಿಕೆಟ್ ಕೊಡಿಸೋದಾಗಿ 1 ಕೋಟಿ ರೂಪಾಯಿ ಪಡೆದು ವಂಚನೆ ಮಾಡಿದ್ದಾರೆ ಅಂತ ಅಮಾನತಾದ ಪಿಡಿಓ ಸಂಜಯ ಚವಡಾಳ ಎಂಬುವರು ಗದಗದ ಮುಂಡರಗಿ ಠಾಣೆಗೆ ದೂರು ನೀಡಿದ್ದಾರೆ.

ಶಿರಹಟ್ಟಿ ಮೀಸಲು ಕ್ಷೇತ್ರಕ್ಕೆ ಬಿಜೆಪಿಯಿಂದ ಟಿಕೆಟ್ ಕೊಡಿಸೋದಾಗಿ ಹೇಳಿ ಹಂತ ಹಂತವಾಗಿ 1 ಕೋಟಿ ರೂಪಾಯಿ ಹಣ ಪಡೆದಿದ್ದರಂತೆ ಸ್ವಾಮೀಜಿ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಪ್ರಕರಣದ ಈ ಬಗ್ಗೆ ಮಾಹಿತಿ ನೀಡಿರುವ ಗದಗ ಎಸ್​​ಪಿ ಬಿಎಸ್ ನೇಮಗೌಡ ಅವರು, ಅಭಿನವ ಹಾಲಶ್ರೀ ಅವರಿಗೆ ಒಂದು ಕೋಟಿ ರೂಪಾಯಿ ಕೊಟ್ಟಿದ್ದಾಗಿ ದೂರು ಕೊಟ್ಟಿದ್ದಾರೆ. ದೂರಿನ ಅನ್ವಯ  ತನಿಖೆ ಆರಂಭಿಸಿದ್ದೇವೆ ಎಂದು ತಿಳಿಸಿದ್ದಾರೆ.

ಶಿರಹಟ್ಟಿ ಮೀಸಲು ಕ್ಷೇತ್ರಕ್ಕೆ ದೂರುದಾರ ಸಂಜಯ್‌, ಬಿಜೆಪಿ ಟಿಕೆಟ್ ಕೇಳಿದ್ದರಂತೆ. ವಿವಿಧ ಹಂತದಲ್ಲಿ ನಗದು ರೂಪದಲ್ಲಿ ಹಣವನ್ನು ಕೊಟ್ಟಿದ್ದಾರೆ. ಈಗಾಗಲೇ ಸಂಜಯ್ ಚವಡಾಳಗೆ ನೋಟಿಸ್ ಸಹ ಕೊಟ್ಟಿದೇವೆ. ದಾಖಲೆಗಳನ್ನು ನಮ್ಗೆ ಕೊಡಿ ಎಂದು ನೋಟಿಸ್ ಕೊಟ್ಟಿದ್ದೇವೆ.

ಇನ್ನು, ಚೈತ್ರಾ ಕುಂದಾಪುರ ಎಂಎಲ್ಎ ಟಿಕೆಟ್ ಡೀಲ್ ಕೇಸ್ ಸಂಬಂಧ ನಾಳೆ ಚೈತ್ರಾ ಸೇರಿ ಉಳಿದ 6 ಆರೋಪಿಗಳ ಸಿಸಿಬಿ ಕಸ್ಟಡಿ ಅಂತ್ಯವಾಗಲಿದೆ. ಹೀಗಾಗಿ ಇವತ್ತು ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇವತ್ತು ಬೆಳಗ್ಗೆ 7 ಗಂಟೆಗೆ ಚೈತ್ರಾ ಕುಂದಾಪುರರನ್ನು ಸಿಸಿಬಿ ಕಚೇರಿಗೆ ಕರೆ ತಂದು ವಿಚಾರಣೆ ನಡೆಸಿದರು.

ಟಿಕೆಟ್ ವಂಚನೆ ಕೇಸಲ್ಲಿ ಯಾರ ಪಾತ್ರವೇನು? ಎಲ್ಲಿ ಹಣ ಪಡೆದ್ರಿ? ಯಾರೆಲ್ಲಾ ಹಣವನ್ನು ಹಂಚಿಕೊಂಡ್ರಿ? ಈ ಕೇಸ್‌‌ನಲ್ಲಿ ಬೇರೆ ಯಾರಾದ್ರೂ ಇದ್ದಾರಾ ಅನ್ನೋ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರಂತೆ. ಉಳಿದ ಆರೋಪಿಗಳ ಜೊತೆ ಮುಖಾಮುಖಿ ವಿಚಾರಣೆ  ನಡೆಸಿ, ಆರೋಪಿಗಳ ಸ್ಟೇಟ್‌‌ಮೆಂಟ್‌ ದಾಖಲಿಸಲಾಗಿದೆ.

 

Related Articles

Back to top button
error: Content is protected !!