ಶಿಕ್ಷಣ

ಶಿರಸಿ: ಶಿಕ್ಷಕ ಹುದ್ದೆ ಕೊಡಿಸುವುದಾಗಿ 7ಲಕ್ಷ ನೀಡಿ ಮೋಸ ಹೋದ ಖಾಸಗಿ ಶಾಲೆಯ ಶಿಕ್ಷಕ

Views: 0

ಶಿರಸಿ: ಶಿಕ್ಷಕ ಹುದ್ದೆಗೆ ನಂಬಿ ಏಳು ಲಕ್ಷ ರೂ. ಮೋಸ ಹೋದ ಶಿರಸಿಯ ಖಾಸಗಿ ಶಾಲೆಯ ಶಿಕ್ಷಕ ಪ್ರದೀಪ ನಾರಾಯಣ ನಾಯ್ಕ ನ್ಯಾಯ ಒದಗಿಸುವಂತೆ ಮಾರುಕಟ್ಟೆ ಠಾಣೆ ಮೆಟ್ಟಿಲೇರಿದ್ದಾರೆ.

ಶಿರಸಿಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಅಧೀಕ್ಷಕಿ ಪುಷ್ಪಾ ಮಾಜಾಳಿಕರ್ ಹಾಗೂ ಕಾರಾವಾರದ ಶಿವಾಜಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ನವೀನ ಗಾಂವಕರ್ ಮೋಸ ಮಾಡಿದ ಆರೋಪಿಗಳಾಗಿದ್ದಾರೆ.

ಈ ಅರೋಪಿಗಳು ಕಾರವಾರದ ಹಣಕೋಣ ಸಾಂತೇರಿ ವಿದ್ಯಾಲಯದ ಪ್ರೌಢ ಶಾಲೆಯಲ್ಲಿ ಶಿಕ್ಷಕ ಹುದ್ದೆ ಕೊಡಿಸುವದಾಗಿ ಬರೊಬ್ಬರಿ ಏಳು ಲಕ್ಷ ರೂ ಹಣವನ್ನು ಪ್ರದೀಪರಿಂದ ಪಡೆದಿದ್ದರು ಎನ್ನುವ ದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ನವೀನ ಖಾತೆಗೆ ಐದು ಲಕ್ಷ ರೂ,, ಪುಷ್ಪಾ ಕೈಯಲ್ಲಿ ಎರಡು ಲಕ್ಷ ರೂ. ನೀಡಿದ್ದಾರೆ ಎಂದು ದೂರಿ‌ನಲ್ಲಿ ಪ್ರಸ್ತಾಪಿಸಲಾಗಿದೆ. ಪೊಲೀಸರು‌ ತನಿಖೆ ಆರಂಭಿಸಿದ್ದಾರೆ.

Related Articles

Back to top button