ಶಿಕ್ಷಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಶಾಲಾ ಸಂಚಾಲಕ.. ಎಂದಿನಂತೆ ಶಾಲೆಗೆ ಬಂದ ಶಿಕ್ಷಕಿಯನ್ನು ತಡೆದ ಸೆಕ್ಯೂರಿಟಿ ಗಾರ್ಡ್!

Views: 1149
ಕುಂದಾಪುರ: ಬಸ್ರೂರಿನ ಆಂಗ್ಲ ಮಾಧ್ಯಮ ಶಾಲೆಯೊಂದರಲ್ಲಿ ಶಾಲಾ ಸಂಚಾಲಕ ತನ್ನೊಂದಿಗೆ ಕೊಠಡಿಯಲ್ಲಿ ಶಿಕ್ಷಕಿಯನ್ನು ಅಸಭ್ಯವಾಗಿ ವರ್ತಿಸಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸಿ ಹೊರಬಂದಿದ್ದ ಆ ಶಾಲೆಯ ಉಪ ಪ್ರಾಂಶುಪಾಲೆ ಪೊಲೀಸರಿಗೆ ದೂರು ನೀಡಿದ್ದು, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿಕ್ಷಕಿ ಎಂದಿನಂತೆ ಶಾಲೆಗೆ ಬಂದಾಗ ಸೆಕ್ಯೂರಿಟಿ ಗಾರ್ಡ್ ಅವರನ್ನು ಅರ್ಧ ತಾಸಿಗಿಂತಲೂ ಹೆಚ್ಚು ಕಾಲ ತಡೆದು ನಿಲ್ಲಿಸಿ ಶಾಲೆಯ ಒಳಗೆ ಬಾರದಂತೆ ನಿರ್ಬಂಧಿಸಲಾಗಿದೆ.ಶಿಕ್ಷಕಿಯ ಗೋಳನ್ನು ಕಂಡ ಸ್ಥಳೀಯರು ಪೊಲೀಸರಿಗೆ ದೂರ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪಿಎಸ್ಐ ಅವರನ್ನು ತಡೆಯಲಾಯಿತು ಈ ವಿಚಾರವಾಗಿ ಗಮನಕ್ಕೆ ತಂದಾಗ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶೋಭಾ ಶೆಟ್ಟಿ ಅವರು ಸ್ಥಳಕ್ಕೆ ಬಂದು ಗೇಟ್ ತೆಗೆಯದಿದ್ದಾಗ ಗೇಟ್ ಅನ್ನು ತೆಗೆಸಿ ಶಿಕ್ಷಕಿಯೊಂದಿಗೆ ಶಾಲೆಯ ಒಳಗೆ ಪ್ರವೇಶಿಸಿದರು. ಶಾಲಾ ಮಂಡಳಿಯ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡ ಶಿಕ್ಷಣಾಧಿಕಾರಿಗಳು ಇಲ್ಲಿ ಕೆಲಸ ಮಾಡಿಕೊಂಡಿರುವ ಶಿಕ್ಷಕಿಯನ್ನು ಒಳಗೆ ಬಿಡದಿರುವುದು ಸರಿಯಲ್ಲ ನಿಮ್ಮ ಸಮಸ್ಯೆ ಏನಿದ್ದರೂ ಆಡಳಿತ ಮಂಡಳಿಯೊಳಗೆ ತೀರ್ಮಾನಿಸಿಕೊಳ್ಳಬೇಕು.
ಶಾಲಾ ಆಡಳಿತ ಮಂಡಳಿಯ ಮೇಲೆ ಈ ಹಿಂದೆ ಹಲವಾರು ದೂರುಗಳಿದ್ದು ಈ ಕುರಿತು ಮೇಲಾಧಿಕಾರಿಗಳಿಗೆ ದೂರು ನೀಡಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ ಮತ್ತು ಶಾಲಾ ಸಮಸ್ಯೆಯನ್ನು ಮಾತುಕತೆಯ ಮೂಲಕ ತಿಳಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.