ಶಿಕ್ಷಣ

ವಿಜಯ ಮಕ್ಕಳ ಕೂಟ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತು ಉದ್ಘಾಟನೆ ಮತ್ತು ಪದಪ್ರದಾನ

Views: 220

ಕನ್ನಡ ಕರಾವಳಿ ಸುದ್ದಿ: ಗ್ರಾಮ ಸೇವಾ ಸಂಗಮ ಟ್ರಸ್ಟ್ ಪ್ರಾಯೋಜಿತ ವಂಡ್ಸೆ ಆತ್ರಾಡಿಯ ವಿಜಯ ಮಕ್ಕಳ ಕೂಟ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 07.07.2025 ರಂದು ವಿದ್ಯಾರ್ಥಿ ಸಂಸತ್ತು ಉದ್ಘಾಟನೆ ಮತ್ತು ಪದಪ್ರದಾನ ಸಮಾರಂಭ ನಡೆಯಿತು.

ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಸುಭಾಶ್ಚಂದ್ರ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ವಿದ್ಯಾರ್ಥಿ ಸಂಸತ್ ಮೂಲಕ ಉತ್ತಮ ನಾಯಕತ್ವ ಗುಣ, ಶಿಸ್ತುಬದ್ಧವಾದ ಕಾರ್ಯವನ್ನು ಮತ್ತು ನಿರ್ಣಯಗಳನ್ನು ತೆಗೆದುಕೊಳ್ಳುವ ಗುಣಗಳೊಂದಿಗೆ ಕರ್ತವ್ಯ ನಿಷ್ಠೆಯಿಂದ ಪಾಲಿಸಿ ಎಂದರು. 

ವಂಡ್ಸೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಡಿಕೆ ಕೊಡ್ಲು ಉದಯ್ ಕುಮಾರ್ ಶೆಟ್ಟಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ, ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ನಾಯಕರಾಗಲು ಶಾಲಾ ಹಂತದಲ್ಲಿಯೇ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಶೈಕ್ಷಣಿಕ ಬೆಳವಣಿಗೆಯ ಜೊತೆಗೆ ಸಾಮಾಜಿಕ ಕಳಕಳಿ ಮತ್ತು ಸೇವಾ ಮನೋಭಾವದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತಂದೆ ತಾಯಿ ಮತ್ತು ಸಮಾಜದ ಋಣವನ್ನು ತೀರಿಸುವ ಕೆಲಸ ಆಗಬೇಕು. ಉತ್ತಮ ನಾಯಕರಾಗುವ ನಿಟ್ಟಿನಲ್ಲಿ ಅತ್ಯುತ್ತಮ ಸಂಸ್ಕಾರಗಳನ್ನು ಶಾಲಾ ಹಂತದಲ್ಲಿಯೇ ಬೆಳೆಸಿಕೊಂಡು ರಾಜಕೀಯ ಪ್ರವೇಶ ಮಾಡಿದಾಗ ಪ್ರಜಾಪ್ರಭುತ್ವ ಸದೃಢವಾಗುತ್ತದೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಬಾಗವಹಿಸಿದ್ದ ಮುಖ್ಯ ಅತಿಥಿ ರಾಜಕೀಯ ಶಾಸ್ತ್ರ ಉಪನ್ಯಾಸಕ ಸುಧಾಕರ ವಕ್ವಾಡಿ ಅವರು ಉಪನ್ಯಾಸ ನೀಡುತ್ತಾ, ಒಳ್ಳೆಯ ನಾಯಕ, ರಾಜಕೀಯ ವ್ಯವಸ್ಥೆ, ಶಿಸ್ತು, ಸಂಯಮ ಕುರಿತು ಹೇಳಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ನಾಯಕನಾಗಿ ಅನ್ವಿತ್ ಶೆಟ್ಟಿ, ಉಪನಾಯಕನಾಗಿ ತನ್ವಿ ಶೆಟ್ಟಿ ಅವರು ಪದಪ್ರಧಾನದಲ್ಲಿ ಅಧಿಕಾರ ಸ್ವೀಕರಿಸಿದರು. ಜೊತೆಯಲ್ಲಿ ಸ್ರಜನ್ 10ನೇ ತರಗತಿ, ಕ್ರತಿ 10ನೇ ತರಗತಿ, ಶರಣ್ಯ ಶೆಟ್ಟಿ 10ನೇ ತರಗತಿ, ರಿಷಿ 9 ನೇ ತರಗತಿ, ಪ್ರಥ್ವಿ 9ನೇ ತರಗತಿ, ದಿಶಾಂತ್ 9ನೇ ತರಗತಿ, ಸಂತ್ರಪ್ತಿ 9ನೇ ತರಗತಿ, ಶನ್ವಿತ್ 9ನೇ ತರಗತಿ, ಪ್ರತಿಕ್ಷ 9ನೇ ತರಗತಿ, ಶ್ರೀಶಾ 10ನೇ ತರಗತಿ ಇನ್ನಿತರ ವಿಭಾಗದಲ್ಲಿ ಪದಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿ ಪ್ರಮಾಣ ವಚನ ಸ್ವೀಕರಿಸಿದರು. 

ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ದೀಪಿಕಾ ಸುಭಾಶ್ ಸ್ವಾಗತಿಸಿ, ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. 

ಕಾರ್ಯಕ್ರಮದ ಮೊದಲು ವಿದ್ಯಾರ್ಥಿ ಸರ್ಕಾರದ ಪ್ರತಿನಿಧಿಗಳು ಮೆರವಣಿಗೆಯಲ್ಲಿ ವೇದಿಕೆಗೆ ಆಗಮಿಸಿ ಪದಪ್ರಧಾನದಲ್ಲಿ ಭಾಗವಹಿಸಿದರು. 

ದೀಪ್ತಿ ಶೆಟ್ಟಿ, ಸನ್ನಿದಿ ಮೊಗವೀರ ಕಾರ್ಯಕ್ರಮ ನಿರೂಪಿಸಿದರು. ಸಾನ್ವಿ ವಂದಿಸಿದರು.

 

Related Articles

Back to top button