ಮಾಹಿತಿ ತಂತ್ರಜ್ಞಾನ
ವಾಟ್ಸಾಪ್‌ಗೆ ಆರ್.ಟಿ.ಒ ಪಿಡಿಎಫ್ ಸಂದೇಶ: ರೂ.5,63,117 ವಂಚನೆ
Views: 6
ಕನ್ನಡ ಕರಾವಳಿ ಸುದ್ದಿ: ಆರ್.ಟಿ.ಒ ಹೆಸರಿನಲ್ಲಿ ಬಂದ ಲಿಂಕ್ ಓಪನ್ ಮಾಡಿದ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ 5,63,117 ರೂ. ಹಣವನ್ನು ಸೈಬರ್ ವಂಚಕರು ದೋಚಿದ ಘಟನೆ ಕಾರ್ಕಳದಲ್ಲಿ ನಡೆದಿದೆ.
ವಾಸುದೇವ ಅವರ ವಾಟ್ಸಾಪ್‌ಗೆ ಆರ್.ಟಿ.ಒ ಪಿಡಿಎಫ್ ಮಾದರಿಯ ಸಂದೇಶ ಬಂದಿದ್ದು, ಅದನ್ನು ಓಪನ್ ಮಾಡಲು ಪ್ರಯತ್ನಿಸಿದಾಗ ಅದು ತೆರೆದುಕೊಂಡಿರಲಿಲ್ಲ.
ಆದರ ಬೆನ್ನಲ್ಲೇ ಅವರ ಮೊಬೈಲ್‌ಗೆ ಸರಣಿ ಒಟಿಪಿಗಳು ಬಂದಿದ್ದು, ತದನಂತರ ಅವರ ಯೂನಿಯನ್ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು 5,63,117 ರೂ. ಕಡಿತಗೊಂಡಿದೆ. ಅಪರಿಚಿತ ವ್ಯಕ್ತಿಗಳು ಅಕ್ರಮವಾಗಿ ಹಣ ವರ್ಗಾವಣೆ ಮಾಡಿ ವಂಚಿಸಲಾಗಿದೆ.
ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.






