ವಕ್ವಾಡಿ ಶಾಲೆ: ಸ್ವಾತಂತ್ರ್ಯ ದಿನಾಚರಣೆ ಮತ್ತು ಧ್ವಜಸ್ತಂಭ ಉದ್ಘಾಟನೆ

Views: 0
ವಕ್ವಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಳಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಆಶಾಲತಾ ಶೆಟ್ಟಿ ಅವರು ಧ್ವಜಾರೋಹಣ ನೆರವೇರಿಸಿದರು.
ನೂತನ ಧ್ವಜ ಸ್ತಂಭವನ್ನು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿ.ಜಿ ಅಶೋಕ್ ಕುಮಾರ್ ಹೆಗ್ಡೆ ಅವರ ಪುತ್ರಿ ಶಯನ ಸಂದೇಶ ಹೆಗ್ಡೆಯವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ್ ಶೆಟ್ಟಿ, ಭಾರತಿ, ಶಾರದಾ, ಚೈತ್ರ, ಶಾಲಾ ಅಭಿವೃದ್ಧಿ ಹಾಗೂ ಮೇಲು ಉಸ್ತುವಾರಿ ಸಮಿತಿ ಅಧ್ಯಕ್ಷರಾದ ಅನಂತಪದ್ಮನಾಭ ಶೆಟ್ಟಿಗಾರ್, ಉಪಾಧ್ಯಕ್ಷರಾದ ವನಿತಾ ಆಚಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸತ್ಯರಂಜನ್ ಹೆಗ್ಡೆ, ಉಪಾಧ್ಯಕ್ಷರಾದ ನಿವೃತ್ತ ಶಿಕ್ಷಕ ದಿನಕರ್ ಶೆಟ್ಟಿ, ಯುವಶಕ್ತಿ ಮಿತ್ರ ಮಂಡಳಿ ಅಧ್ಯಕ್ಷರಾದ ವಿಜಯ ಪೂಜಾರಿ ಹಾಗೂ ದಾನಿಗಳು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕರಾದ ಕೆ .ಗಣೇಶ್ ಶೆಟ್ಟಿ ಸ್ವಾಗತಿಸಿದರು. ಅನಿತಾ .ಜಿ ಕಾರ್ಯಕ್ರಮ ನಿರ್ವಹಿಸಿದರು. ಗೌರವ ಶಿಕ್ಷಕಿಯರಾದ ವೀಣಾ, ನೂತನ್, ಲಕ್ಷ್ಮಿ ,ಮಲ್ಲಿಕಾ, ದಿವ್ಯ ಲಕ್ಷ್ಮೀ, ಹಲೀಮ ಅವರು ಸಹಕರಿಸಿದರು.
ಸುಲೇಖ ಅವರು ವಂದಿಸಿದರು. ಈ ಸಂದರ್ಭದಲ್ಲಿ ಮಹಾಲಿಂಗೇಶ್ವರ ಚಂಡೆ ಬಳಗ ವಕ್ವಾಡಿ ಇವರಿಂದ ಚೆಂಡೆ ವಾದನ ನಡೆಯಿತು.