ಶಿಕ್ಷಣ

ವಕ್ವಾಡಿಯಲ್ಲಿ ಕೋಟೇಶ್ವರ ಕ್ಲಸ್ಟರ್ ಮಟ್ಟದ ಪ್ರತಿಭಾ ಪ್ರತಿಭಾ ಕಾರಂಜಿ- 2024 

Views: 249

ಕುಂದಾಪುರ : ಕೋಟೇಶ್ವರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯ ಸ್ಪರ್ಧೆಯು ಸೆ.12 ರಂದು ಗುರುವಾರ ಸರಕಾರಿ ಪ್ರೌಢಶಾಲೆ ವಕ್ವಾಡಿಯಲ್ಲಿ ನಡೆಯಿತು.

ಉದ್ಘಾಟನೆಯನ್ನು ಕಾಳಾವರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿರುವ ಮಂಜುನಾಥ್ ಶೆಟ್ಟಿಗಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ SDMC ಅಧ್ಯಕ್ಷರಾದ ಶ್ರೀ ರಾಜು ಕುಲಾಲ್ ವಹಿಸಿದ್ದರು.

ಕಾಳಾವರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಪಾರ್ವತಿ ಸೇರಿಗಾರ್, ಪಂಚಾಯತ್ ಸದಸ್ಯರಾಗಿರುವ ರವಿರಾಜ್ ಶೆಟ್ಟಿ, ರಮೇಶ್ ಶೆಟ್ಟಿ, ರಾಮಚಂದ್ರ ನಾವುಡ, ಶ್ರೀಮತಿ ಆಶಾಲತಾ ಶೆಟ್ಟಿ, ಶ್ರೀಮತಿ ಭಾರತಿ,ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷರಾದ ಸತೀಶ್ ನಾಯಕ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಗಣೇಶ್ ಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ, ವಕ್ವಾಡಿ ಫ್ರೆಂಡ್ಸ್ ವಕ್ವಾಡಿ ಅಧ್ಯಕ್ಷರಾದ ಕಿರಣ್ ಶೆಟ್ಟಿ, ಶ್ರೀಮತಿ ಅನಿತಾ ಮುಖ್ಯೋಪಾಧ್ಯಾಯರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಕ್ವಾಡಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ರೇಖಾ, ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಕಾಶ್, ಎಲ್ಲಾ SDMC ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸರಿ ಸುಮಾರು 300 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಶಿಕ್ಷಣ ಸಂಯೋಜಕರಾದ ರಾಜು ಖಾರ್ವಿ ಪ್ರಾಸ್ತಾವಿಕ ಮಾತನಾಡಿದರು.ಕಾರ್ಯಕ್ರಮದ ರೂವಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಶ್ರೀಮತಿ ಸುಜಾತ ಸ್ವಾಗತಿಸಿದರು.ಯುವಜನ ಸೇವಾ ಕ್ರೀಡಾಧಿಕಾರಿ ಕುಸುಮಾಕರ್ ಶೆಟ್ಟಿ ವಂದಿಸಿದರು.ದೇವರಾಜ್ ಹೆಬ್ಬಾರ್ ಮತ್ತು ಶಿಕ್ಷಕರಾದ ಸದಾನಂದ ಶೆಟ್ಟಿ ವಕ್ವಾಡಿ ಕಾರ್ಯಕ್ರಮ ನಿರ್ವಹಿಸಿದರು.

 

Related Articles

Back to top button