ರಾಜಕೀಯ
ಲೋಕಸಭಾ ಚುನಾವಣೆ: ರಾಜ್ಯದಲ್ಲಿ 2ನೇ ಹಂತದ ಮತದಾನ ಶೇ 70.03

Views: 72
2ನೇ ಹಂತದಲ್ಲಿ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಇಂದು ನಡೆದ ಮತದಾನ ಬಹುತೇಕ ಶಾಂತಿಯುತವಾಗಿ ಅಂತ್ಯವಾಗಿದೆ. ರಾಜ್ಯದಲ್ಲಿ ಎರಡನೇ ಹಂತದಲ್ಲಿ ಶೇ 70.03ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಬಿಸಿಲಿನ ನಡುವೆಯೂ ಅನೇಕ ಕಡೆ ಮತದಾರರು ಉತ್ಸಾಹದಿಂದ ಮತ ಚಲಾಯಿಸಿದ್ದಾರೆ. ಹೈದರಾಬಾದ್ ಕರ್ನಾಟಕದ ಕೆಲವೆಡೆ ನಿರೀಕ್ಷಿಸಿದಷ್ಟು ಮತದಾನ ನಡೆದಿಲ್ಲ. ಇದಕ್ಕೆ ಭಾರಿ ಬಿಸಿಲೇ ಕಾರಣ ಎನ್ನಲಾಗಿದೆ.
ಕೆಲವೆಡೆ ಮತದಾನ ಬಹಿಷ್ಕಾರ ಹಾಗೂ ಸುರಪುರ ಉಪ ಚುನಾವಣಾ ಕಣದಲ್ಲಿ ಕಾಂಗ್ರೆಸ್–ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿಯಾಗಿದ್ದು ಬಿಟ್ಟರೇ ಚುನಾವಣೆ ಬಹುತೇಕ ಅಂತ್ಯವಾಗಿದೆ.
ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಮತದಾನ?
ಚಿಕ್ಕೋಡಿ: 76.47
ಬೆಳಗಾವಿ: 71.00
ವಿಜಯಪುರ: 64.71
ಬಾಗಲಕೋಟೆ: 70.10
ಧಾರವಾಡ: 72.12
ಹಾವೇರಿ: 74.75
ದಾವಣಗೆರೆ: 76.23
ಶಿವಮೊಗ್ಗ: 76.05
ಉತ್ತರ ಕನ್ನಡ: 73.52
ಕೊಪ್ಪಳ: 69.87
ಬಳ್ಳಾರಿ: 72.35
ರಾಯಚೂರು: 61.81
ಕಲಬುರಗಿ: 61.73
ಬೀದರ್: 63.55






