ಆರೋಗ್ಯ

ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Views: 1140

ಕುಂದಾಪುರ: ಯಡಾಡಿ- ಮುತ್ಯಾಡಿ ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂನ್ 21ರಂದು ವಿಶ್ವ ಯೋಗ ದಿನಾಚರಣೆ ನಡೆಯಿತು.

ರಾಜ್ಯ ಯೋಗ ಸಂಪನ್ಮೂಲ ವ್ಯಕ್ತಿ ಮತ್ತು ನಿವೃತ್ತ ದೈಹಿಕ ಶಿಕ್ಷಕ ಕಿರಣ್ ಕುಮಾರ್.ಬಿ ಅವರು ಯೋಗದ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ, ವ್ಯಕ್ತಿತ್ವದ ಬೆಳವಣಿಗೆ ಮತ್ತು ಸದೃಢ ಆರೋಗ್ಯ ಸುಧಾರಣೆಯಲ್ಲಿ ಯೋಗದ ಬಗ್ಗೆ ವಿವರ ನೀಡುತ್ತಾ. ದೈಹಿಕ ವ್ಯಾಯಾಮ ಮತ್ತು ಆಸನಗಳಿಂದ ಮುಂದುವರಿದು ಮನಸ್ಸು ಮತ್ತು ಬುದ್ಧಿಯನ್ನು ನಿಯಂತ್ರಿಸುವ ಜ್ಞಾನ ಸಂಪಾದನೆಯೇ ಯೋಗ, ಎಲ್ಲಿ ಏನನ್ನು ಕಳೆದುಕೊಂಡಿದ್ದೀರಿ ಏನನ್ನು ಪಡೆಯಲು ಇಚ್ಚಿಸಿದ್ದೀರಿ ಅದನ್ನು ಪಡೆಯಲು ಮತ್ತು ಅಸಾಧ್ಯವಾದುದನ್ನು ಸಾಧಿಸಲು ಯೋಗದಿಂದ ಮಾತ್ರ ಸಾಧ್ಯ. ಸಂಸ್ಕಾರ ಮತ್ತು ಆರೋಗ್ಯವಂತ ವ್ಯಕ್ತಿ ನಿರ್ಮಾಣದಿಂದ ಆದರ್ಶ ಸಮಾಜ ನಿರ್ಮಿಸುವಲ್ಲಿ ಯೋಗ ಸಹಕಾರಿ ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಸುಜ್ಞಾನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಡಾ. ರಮೇಶ್ ಅವರು ಯೋಗ ಶಿಬಿರವನ್ನು ಉದ್ಘಾಟಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಾಚೀನ ಕಾಲದ ವೈದ್ಯಕೀಯ ಸಂಸ್ಕೃತಿಯನ್ನು ಚಿಕಿತ್ಸೆ ನೀಡುವ ಮೂಲಕ ಹುಟ್ಟಿಕೊಂಡ ಯೋಗವು ದೈಹಿಕ, ಮಾನಸಿಕ, ಆರೋಗ್ಯದ ಮೇಲೆ ಪರಿಣಾಮ ಬೀರುವ ಅಭ್ಯಾಸ ಮತ್ತು ಶಿಸ್ತು ವ್ಯವಸ್ಥೆಯಾಗಿದೆ. ಇಂದು ಪ್ರಪಂಚದಾದ್ಯಂತ ಯೋಗ  ಆಚರಣೆಯಲ್ಲಿದೆ. ದೇಹಕ್ಕೆ ಮನಸ್ಸಿಗೆ ವಿಶ್ರಾಂತಿ ನೀಡುವ ಮನೋ- ದೈಹಿಕ ಎಲ್ಲಾ ಕಾಯಿಲೆ ನಿವಾರಣೆಯಾಗಿ,  ಕೆಟ್ಚ ಯೋಚನೆಗಳ ಮೇಲೆ ಹತೋಟಿ ತಂದು ಶಾಂತಿ -ನೆಮ್ಮದಿಯಿಂದ ಆಂತರಿಕ ದೋಷವನ್ನು ಯೋಗದ ಮೂಲಕ ನಿವಾರಿಸಿಕೊಳ್ಳಬಹುದು ಎಂದರು.

ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಾಲಾ ಪ್ರಾಂಶುಪಾಲರಾದ ಪ್ರದೀಪ್ .ಕೆ ಸ್ವಾಗತಿಸಿದರು. ಶಿಕ್ಷಕಿ ರೇಣುಕಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

 

 

Related Articles

Back to top button