ಕೃಷಿ

ರೈತರಿಗೆ 14ನೇ ಕಂತಿನ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಹಣ ಬಿಡುಗಡೆ

Views: 2

ಗುರುವಾರ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ 14ನೇ ಕಂತಿನ ಹಣವನ್ನು ಕೋಟ್ಯಂತರ ರೈತರ ಖಾತೆಗೆ ಬಿಡುಗಡೆ ಮಾಡಲಾಗಿದೆ. ಸರಕಾರ 8.5 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ತಲಾ 2,000 ರೂ.ನಂತೆ ಹಣವನ್ನು ನೇರವಾಗಿ ಖಾತೆಗೆ ಜಮಾ ಮಾಡಿದೆ. ಒಟ್ಟು 17,000 ಕೋಟಿ ರೂ.ಗೂ ಹೆಚ್ಚು ಹಣವನ್ನು ಕೇಂದ್ರ ಸರಕಾರ ರೈತರ ಖಾತೆಗೆ ವರ್ಗಾಯಿಸಿದೆ

ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ 14ನೇ ಕಂತಿನ ಹಣ ಗುರುವಾರ ಕೋಟ್ಯಂತರ ರೈತರ ಖಾತೆಗೆ ಬಿಡುಗಡೆಯಾಗಿದೆ. ಸರಕಾರ 8.5 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ತಲಾ 2,000 ರೂ.ನಂತೆ ಒಟ್ಟು 17,000 ಕೋಟಿ ರೂ.ಗೂ ಹೆಚ್ಚು ಹಣವನ್ನು ನೇರವಾಗಿ ಖಾತೆಗೆ ವರ್ಗಾವಣೆ ಮಾಡಿದೆ.

ಗುರುವಾರ ಬಿಡುಗಡೆಯಾದ ಹಣವನ್ನು ಸೇರಿಸಿದರೆ, ಈ ತನಕ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ 2.60 ಲಕ್ಷ ಕೋಟಿ ರೂ.ಗಳನ್ನು ಫಲಾನುಭವಿ ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ

.ಹಣ ಬಂದಿಲ್ಲವೇ?

ನೀವು ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ ಫಲಾನುಭವಿಯಾಗಿದ್ದರೆ, ನಿಮ್ಮ ಖಾತೆಗೆ 14ನೇ ಕಂತಿನ ಹಣ 2000 ರೂ. ಜಮೆ ಆಗಿದೆಯೇ ಎಂದು ಪರಿಶೀಲಿಸಿ. ಬ್ಯಾಂಕ್‌ಗೆ ತೆರಳಿ ನಿಮ್ಮ ಪಾಸ್‌ಬುಕ್‌ ಎಂಟ್ರಿ ಮಾಡಿಸುವ ಮೂಲಕ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿಯ ಹಣ ಬಂದಿದೆಯೇ ಅಥವಾ ಇಲ್ಲವೇ ಎಂದು ಖಚಿತಪಡಿಸಿಕೊಳ್ಳಿ. ಒಂದು ವೇಳೆ ನೀವು ಫಲಾನುಭವಿ ಆಗಿದ್ದರೂ ನಿಮ್ಮ ಖಾತೆಗೆ ಹಣ ಜಮೆ ಆಗಿಲ್ಲದಿದ್ದರೆ, ನೀವು ಕೆವೈಸಿ ಮಾಡಿಸಿ

Related Articles

Back to top button
error: Content is protected !!