ಇತರೆ

ರಾಯಚೂರಿನಲ್ಲಿ ಕಾರು ಪಲ್ಟಿಯಾಗಿ ಬೀಜಾಡಿಯ ಮಹಿಳೆ ಸಾವು

Views: 554

ಕನ್ನಡ ಕರಾವಳಿ ಸುದ್ದಿ: ರಾಯಚೂರಿನಲ್ಲಿ ಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿಯಾಗಿ ಕುಂದಾಪುರ ತಾಲೂಕಿನ ಬೀಜಾಡಿಯ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಶನಿವಾರ ನಡೆದಿದೆ.

ಹಾಜೀರಾ (65) ಮೃತಪಟ್ಟ ಮಹಿಳೆ,ಕುಟುಂಬದ ಐವರು ಗಂಭೀರ ಗಾಯಗೊಂಡಿದ್ದಾರೆ.ಅಪಘಾತ  ರಾಯಚೂರು ನಗರದ ಮುನ್ನಲಾಪುರ ಕ್ರಾಸ್ ಬಳಿ ನಡೆದಿತ್ತು.

ಉದ್ಯಮಿ ಹಾಲಾಡಿ ಅಬ್ದುಲ್ಲಾ ಅವರ ಪತ್ನಿ ಹಾಜಿರಾ ಮಗ ಇಮ್ರಾನ್ ಮತ್ತು ಸೊಸೆ ಸಾರಾ ಹಾಗೂ ಮಗನ ಮೂವರು ಗಂಡು ಮಕ್ಕಳೊಂದಿಗೆ ಆ. 2ರಂದು ಹೈದ್ರಾಬಾದ್‌ಗೆ ಪ್ರವಾಸ ಹೊರಟಿದ್ದರು.ಗಂಭೀರ ಗಾಯಗೊಂಡ ಇಶಾನ್ ಅಬ್ದುಲ್, ಇಲಾನ್, ಇಸ್ಮಾಯಿಲ್, ಮಹಮದ್ ಇಜಾನ ಮಹಮದ್ ಇಮ್ರಾನ್ ಎಂಬುವವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Related Articles

Back to top button
error: Content is protected !!