ರಾಜ್ಯದಲ್ಲಿ ಶೇ.67ರಷ್ಟು ಮಳೆ ಕೊರತೆ :ಆತಂಕಕ್ಕೀಡಾದ ರೈತರು

Views: 0
ಕಳೆದ ನಾಲ್ಕೈದು ವರ್ಷಗಳಿಂದ ಅಗಸ್ಟ್ ನಲ್ಲಿ ರಾಜ್ಯದಲ್ಲಿ ಉತ್ತಮ ಮಳೆ ಆಗುತ್ತಿತ್ತು.ಆದರೆ, ಈ ಬಾರಿ ಕೆಲ ತಾಲೂಕುಗಳನ್ನು ಹೊರತುಪಡಿಸಿದರೆ ಬಹುತೇಕ ಕಡೆಗಳಲ್ಲಿ ಮಳೆಯಾಗಿಲ್ಲ ಈ ವರ್ಷ ಮುಂಗಾರು ದುರ್ಬಲಗೊಂಡಿರುದರಿಂದ ಮಳೆ ಕೊರತೆ ಎದುರಿಸುವಂತಾಗಿದೆ. ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಮುಂದಿನ ಎರಡು ತಿಂಗಳು ನಿರೀಕ್ಷಿತ ಪ್ರಮಾಣದ ಮಳೆ ಬೀಳುವ ಸಾಧ್ಯತೆ ಇಲ್ಲದೆ ಇರುವುದರಿಂದ ಬರೆದ ಛಾಯೆ ಆವರಿಸಲಿದೆ.
ಹವಾಮಾನ ತಜ್ಞರ ಪ್ರಕಾರ ಇನ್ನೆರಡು ವಾರ ರಾಜ್ಯದಲ್ಲಿ ವ್ಯಾಪಕ ಮಳೆ ಆಗುವ ಸೂಚನೆಗಳು ಇಲ್ಲ. ಆಗಸ್ಟ್ 1ರಿಂದ 12ರವರೆಗೆ ರಾಜ್ಯದಲ್ಲಿ 99.8 ಮಿ.ಮೀ ಮಳೆಯಾಗಬೇಕಿತ್ತು ಆದರೆ ಕೇವಲ 37.8 ಮಿ.ಮೀ ನಷ್ಟು ಮಾತ್ರ ಮಳೆಯಾಗಿದ್ದು ರಾಜ್ಯದಲ್ಲಿ ಶೇ. 67ರಷ್ಟು ಮಳೆ ಕೊರತೆ ಉಂಟಾಗಿದೆ.
ಜೂನ್ ಮಳೆ ಕೊರತೆ ಜುಲೈನಲ್ಲಿ ಸುರಿದ ಭಾರಿ ಮಳೆ ಸರಿದೂಗಿಸಿದೆ. ಆದರೆ ಈ ರೀತಿ ಏಕಾಎಕಿ ಮಳೆಯಿಂದಾಗಿ ರೈತರ ಬೆಳೆ ಹಾನಿಯಾಗಿದೆ. ಮತ್ತೆ ಮಳೆ ಬರುವ ಸಂದರ್ಭದಲ್ಲಿ ಮಳೆ ಬಾರದಿದ್ದರೆ ಬೆಳೆ ಹಾನಿಯಾಗುವ ಆತಂಕವಿದೆ.
ಜೂನ್ ನಿಂದ ಆಗಸ್ಟ್ 5ನೇ ತಾರೀಖಿನವರೆಗೆ ರಾಜ್ಯದ 60 ತಾಲೂಕುಗಳಲ್ಲಿ ಮಳೆ ಕೊರತೆಯಾಗಿದೆ. ಇನ್ನುಳಿದ ತಾಲೂಕುಗಳಲ್ಲಿ ಜುಲೈನಲ್ಲಿ ಸುರಿದ ಮಳೆ ಸರಿದೂಗಿಸಿದೆ.ಈ ಮೂಲಕ 225 ತಾಲೂಕು ಹಾಗೂ 819 ಹೋಬಳಿಯಲ್ಲಿ ಮಳೆ ಕೊರತೆ ಕಾಡುತ್ತಿದೆ.
ಈ ನಡುವೆ ಬರ ಘೋಷಣೆ ಮಾರ್ಗಸೂಚಿಗಳನ್ನು ಪರಿಷ್ಕರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರರ್ ಅವರಿಗೆ ಪತ್ರ ಬರೆದಿದ್ದಾರೆ. ಈ ಮಾರ್ಗಸೂಚಿಯಲ್ಲಿ ಹಲವು ಕಠಿಣ ಅಂಶಗಳಿವೆ ಆಯಾ ರಾಜ್ಯದ ಸ್ಥಳೀಯ ಪರಿಸ್ಥಿತಿಗೆ ಮಾರ್ಗಸೂಚಿಗಳಗಳನ್ನು ಸಡಿಲ ಮಾಡಬೇಕು ಇಲ್ಲದಿದ್ದರೆ ರಾಜ್ಯದಲ್ಲಿ ಸಂಕಷ್ಟ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಪತ್ರದಲ್ಲಿ ಕೋರಿಕೊಂಡಿದ್ದಾರೆ.






