ಕೃಷಿ

ರಾಜ್ಯದಲ್ಲಿ ಅರ್ಧದಷ್ಟು ಮಳೆ ಕೊರತೆ :ಬರ ಘೋಷಣೆಗೆ ಮಾನದಂಡ ಪರಿಶೀಲನೆ!

Views: 0

ರಾಜ್ಯದ 120 ತಾಲೂಕುಗಳಲ್ಲಿ ಮಳೆ ಕೊರತೆಯಾಗಿದ್ದು, ಎನ್ ಡಿ ಆರ್ ಎಫ್ ನ ಈಗಿರುವ ಮಾನದಂಡಗಳ ಅನ್ವಯವೇ ಬರ ಘೋಷಣೆ ಮಾಡಬೇಕಾಗಿರುವುದರಿಂದ ತೀವ್ರ ಮಳೆಯ ಕೊರತೆ ಇರುವ 75 ತಾಲೂಕುಗಳ ತಲಾ ಹತ್ತು ಗ್ರಾಮಗಳಲ್ಲಿ ಬೆಳೆ ಸಮೀಕ್ಷೆ ನಡೆಸಿ 10 ದಿನದಲ್ಲಿ ನಿರ್ಣಯಕ್ಕೆ ಬರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ರಾಜ್ಯದಲ್ಲಿ ಶೇಕಡ 50ಕ್ಕಿಂತ ಹೆಚ್ಚು ಪ್ರದೇಶದಲ್ಲಿ ಮಳೆ ಕೊರತೆಯಾಗಿದೆ. ಮುಂದಿನ ದಿನಗಳಲ್ಲಿ ಮಳೆಯ ಮುನ್ಸೂಚನೆ ಇಲ್ಲ. ಸೆಪ್ಟೆಂಬರ್ ನಲ್ಲಿ ವಾಡಿಕೆಗಿಂತ ಮಳೆ ಕಡಿಮೆ ಆಗಬಹುದು. ಮಳೆ ಕೊರತೆ ಹೀಗೆ ಮುಂದುವರಿದರೆ ಎಲ್ಲದಕ್ಕೂ ನಾವು ಸನ್ನದ್ಧರಾಗಬೇಕಾಗುತ್ತದೆ. ಬರ ಘೋಷಣೆಗೆ ಮನವಿ ಇದ್ದು ಇದರ ಮಾನದಂಡಗಳ ಪರಿಶೀಲನೆ ನಡೆಸಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದರು.

ಪ್ರಕೃತಿ ವಿಕೋಪ ಪರಿಸ್ಥಿತಿ ಪರಾಮರ್ಶೆ ಸಂಬಂಧ ಸಚಿವ ಸಂಪುಟ ಸಮಿತಿ ಸಭೆ ಬಳಿಕ ಅವರು ಮಾತನಾಡಿದರು.

ಕೇಂದ್ರ ಸರಕಾರದ ನಿರ್ದಿಷ್ಟ ಅರ್ಜಿ ನಮೂನೆಯಂತೆ ಬರ ಆವರಿಸಿದ ತಾಲೂಕುಗಳಲ್ಲಿ ಕಂದಾಯ ಮತ್ತು ಕೃಷಿ ಇಲಾಖೆಗಳ ಅಧಿಕಾರಿಗಳಿಗೆ ಜಂಟಿಯಾಗಿ ಸ್ಥಳ ಬೆಳೆ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ.

ಜೂನ್ 10 ರಿಂದ ಆಗಸ್ಟ್ 21ರವರೆಗೆ ರಾಜ್ಯಾದ್ಯಂತ 487 ಮಿ.ಮೀಟರ್ ಮಳೆ, ವಾಡಿಕೆಗಿಂತ ಶೇಕಡ 23 ರಷ್ಟು ಕೊರತೆ, ಜೂನ್ ನಲ್ಲಿ ಶೇಕಡ 50 ಕೊರತೆ, ಜುಲ್ಲೆಯಲ್ಲಿ ಶೇಕಡ 30ರಷ್ಟು ಹೆಚ್ಚಿಗೆ, ಅಗಸ್ಟ್ ನಲ್ಲಿ ಶೇಕಡ 50ರಷ್ಟು ಕೊರತೆ,

ಮುಂಗಾರು ಅವಧಿಯಲ್ಲಿ 83.35 ಹೆಕ್ಟೇರ್ ನಲ್ಲಿ ಬಿತ್ತನೆ ಗುರಿ, 51. 87 ಲಕ್ಷ ಹೆಕ್ಟೇರ್ ನಲ್ಲಿ ಬಿತ್ತನೆ, ಮಳೆ, ತೇವಾಂಶ ಕೊರತೆಯಿಂದ 4 ಜಿಲ್ಲೆ ಬಿಟ್ಟರೆ ಉಳಿದೆಡೆ ಬೆಳೆ ಒಣಗುವ ಸ್ಥಿತಿಯಲ್ಲಿದೆ.

ಆಲಮಟ್ಟಿ ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿಲ್ಲದೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಬರಗಾಲದ ಛಾಯೆ ಆವರಿಸಿರುವ ಎಲ್ಲಾ 120 ತಾಲೂಕುಗಳು ಬದಲು 75 ತಾಲೂಕುಗಳ ಆಯ್ಕೆ, 10 ಗ್ರಾಮಗಳಲ್ಲಿ ತಲಾ 5 ಬೆಳೆಗಳ ಸಮೀಕ್ಷೆ ನಡೆಯಲಿದೆ.

ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿ ವರದಿ ಸಲ್ಲಿಸುವುದಕ್ಕೆ 10 ದಿನಗಳ ಗಡುವು ವಿಧಿಸಿದೆ.

ವರದಿ ಪ್ರಕಾರ ಬೆಳೆ ಹಾನಿಯ ಶೇಕಡ 50ಕ್ಕಿಂತ ಅಧಿಕವಾಗಿದ್ದರೆ ಬರ ಘೋಷಣೆಗೆ ಕೇಂದ್ರಕ್ಕೆ ಪತ್ರ ಬರೆಯಲು ತೀರ್ಮಾನಿಸಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದರು.

Related Articles

Back to top button
error: Content is protected !!