ರಾಜಕೀಯ

ರಾಜವಂಶಸ್ಥ, ಮಾಜಿ ಸಚಿವ ಶ್ರೀರಂಗ ದೇವರಾಯಲು ವಿಧಿವಶ

Views: 0

ರಾಜ ವಂಶಸ್ಥ,ಮಾಜಿ ಸಚಿವ ಶ್ರೀರಂಗದೇವರಾಯಲು (87) ಅವರು ತಮ್ಮ ಗಂಗಾವತಿಯ ನಿವಾಸದಲ್ಲಿ ಮಂಗಳವಾರ ವಿಧಿವಶರಾದರು.

ಮೃತರಿಗೆ ಪತ್ನಿ ಲಲಿತಾರಾಣಿ,ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.

1974ರಲ್ಲಿ ಗಂಗಾವತಿಯಲ್ಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿದ್ದಾರೆ.

ಎಂಟು ಬಾರಿ ಸ್ಪರ್ಧಿಸಿ ಐದು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. 1989, 1994,1999 ರಲ್ಲಿ ಮೂರು ಬಾರಿ ಗಂಗಾವತಿಯ ಕ್ಷೇತ್ರದಿಂದ ಗೆಲುವು ಸಾಧಿಸಿ, ಹ್ಯಾಟ್ರಿಕ್ ಸಾಧನೆ ಮಾಡಿದ್ದರು. 2004ರಲ್ಲಿ ಸೋತ ಬಳಿಕ ಚುನಾವಣಾ ರಾಜಕಾರಣದಿಂದ ದೂರ ಉಳಿದಿದ್ದರು.

ವೀರಪ್ಪ ಮೊಯ್ಲಿ ಮುಖ್ಯಮಂತ್ರಿ ಆಗಿದ್ದಾಗ ಅವರ ಸಂಪುಟದಲ್ಲಿ ಸಚಿವರಾಗಿದ್ದರು. ರಾಜ ಮನೆತನದವರಾದರೂ ಜನರೊಂದಿಗೆ ಆಪ್ತತೆಯಿಂದ ಬೆರೆಯುತ್ತಿದ್ದರು. ಬುಧವಾರ ಆನೆಗುಂದಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ

Related Articles

Back to top button
error: Content is protected !!