ಸಾಂಸ್ಕೃತಿಕ

ರಶ್ಮಿಕಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಸು ಫ್ರಮ್ ಸೋ’ ನಟ-ನಿರ್ದೇಶಕ ಜೆ.ಪಿ ತುಮಿನಾಡು

Views: 157

ಕನ್ನಡ ಕರಾವಳಿ ಸುದ್ದಿ: ನಿರೀಕ್ಷೆಗೂ ಮೀರಿದ ಯಶಸ್ಸು ಕಂಡ ‘ಸು ಫ್ರಮ್ ಸೋ’ ಚಿತ್ರದ ನಟ-ನಿರ್ದೇಶಕ ಜೆ.ಪಿ. ತುಮಿನಾಡು ಅವರು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ನಟ, ನಿರ್ದೇಶಕ, ಬರಹಗಾರರಾಗಿ ಹೆಸರು ಮಾಡಿರುವ ಜೆ.ಪಿ. ತುಮಿನಾಡು ಅವರು ರಶ್ಮಿಕಾ ಎಂಬುವರ ಜೊತೆ ಸಪ್ತಪದಿ ತುಳಿದಿದ್ದಾರೆ.

ಅತಿ ಕಡಿಮೆ ಬಜೆಟ್ನಲ್ಲಿ ನಿರ್ಮಾಣಗೊಂಡು ನಿರೀಕ್ಷೆಗೂ ಮೀರಿದ ಯಶಸ್ಸು ಕಂಡ ಸಿನಿಮಾಗಳ ಲಿಸ್ಟ್ನಲ್ಲಿ ‘ಸು ಫ್ರಮ್ ಸೋ’ ಸಿನಿಮಾವೂ ಇದೆ. 3-4 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣಗೊಂಡಿದ್ದ ಈ ಹಾಸ್ಯ ಚಿತ್ರ ಬಾಕ್ಸ್ ಆಫೀಸ್ನಲ್ಲಿ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತು. ತನ್ನ ಮನರಂಜನೆಯಿಂದ ಅಭಿಮಾನಿಗಳನ್ನು ಸೆಳೆದಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಸದ್ದು ಮಾಡಿತ್ತು. ಕೂಲಿ, ವಾರ್ 2 ಅಂತಹ ಬಿಗ್ ಬಜೆಟ್, ಸ್ಟಾರ್ ಸಿನಿಮಾಗಳ ನಡುವೆಯೇ ಚಿತ್ರಮಂದಿರ ಪ್ರವೇಶಿಸಿದ್ದ ರಾಜ್ ಬಿ ಶೆಟ್ಟಿ ನಿರ್ಮಾಣದ ಸು ಫ್ರಮ್ ಸೋ ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಯಶಸ್ವಿ ಆಗಿತ್ತು. ಗಡಿ ಮೀರಿ ಎಲ್ಲೆಡೆ ಸದ್ದು ಮಾಡಿದ ಸಿನಿಮಾ ಬಹುತೇಕ ಸಕಾರಾತ್ಮಕ ಸ್ಪಂದನೆಯನ್ನೇ ಸ್ವೀಕರಿಸಿತ್ತು.

ಜಯ ಪ್ರಕಾಶ್ ತುಮಿನಾಡು ಓರ್ವ ಕರಾವಳಿ ಪ್ರತಿಭೆ. ಕನ್ನಡ ಮತ್ತು ತುಳು ಸಿನಿಮಾಗಳಲ್ಲಿ ಬರಹಗಾರ, ಕಥೆಗಾರ, ನಟ, ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಕೇರಳ ಕಾಸರಗೋಡಿನ ಮಂಜೇಶ್ವರದಲ್ಲಿ ಜನಿಸಿದ ಜೆಪಿ ತುಮಿನಾಡು ಚಿತ್ರರಂಗದಲ್ಲಿ ಕೆಲಸ ಮಾಡುವ ಮೊದಲು 10ಕ್ಕೂ ಹೆಚ್ಚು ವರ್ಷ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ನಾಟಕಗಳ ರಚನೆ, ನಿರ್ದೇಶನ, ನಟನೆಯಲ್ಲಿ ನಿರತರಾಗಿದ್ದರು. ಹಾಸ್ಯ ನಾಟಕಗಳಿಗೇನೇ ಹೆಚ್ಚಿನ ಒತ್ತು ಕೊಡುವ ಇವರು ಆರಂಭದಲ್ಲಿ ಪೈಂಟರ್ ಆಗಿಯೂ ಕೆಲಸ ಮಾಡಿದ್ದರು.

ಬಹಳ ವರ್ಷಗಳ ಹಿಂದೆ ರಂಗಭೂಮಿಯಲ್ಲಿ ನಟನಾ ವೃತ್ತಿಜೀವನ ಪ್ರಾರಂಭಿಸಿದ ಇವರು 2017ರಲ್ಲಿ ರಾಜ್ ಬಿ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಒಂದು ಮೊಟ್ಟೆಯ ಕಥೆ ಮೂಲಕ ಕನ್ನಡ ಹಿರಿತೆರೆ ಪ್ರವೇಶಿಸಿದರು. ನಂತರ ‘ಗರುಡ ಗಮನ ವೃಷಭ ವಾಹನ’, ಸ್ವಾತಿ ಮುತ್ತಿನ ಮಳೆ ಹನಿಯೇ, ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 2025ರಲ್ಲಿ ಬಂದ ‘ಸು ಫ್ರಮ್ ಸೋ’ ಚಿತ್ರದಲ್ಲಿ ನಾಯಕ ನಟನಾಗಿ ಮತ್ತು ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ಪ್ರಮುಖ ಪಾತ್ರದಲ್ಲಿ ನಟನೆ, ನಿರ್ದೇಶನದ ಜವಾಬ್ದಾರಿಯನ್ನು ಒಟ್ಟಿಗೆ ನಿರ್ವಹಿಸಿದ್ದು ಇದೇ ಮೊದಲು. ಚೊಚ್ಚಲ ಹೆಜ್ಜೆಯಲ್ಲೇ ಚಿತ್ರ ಭರ್ಜರಿ ಯಶಸ್ಸು ಕಂಡಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ ಈ ಸಿನಿಮಾ ವಿಶ್ವದಾದ್ಯಂತ 122.83 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

Related Articles

Back to top button
error: Content is protected !!