ಶಿಕ್ಷಣ

ರಕ್ತದಲ್ಲಿ ಡೆತ್ ನೋಟ್ ಬರೆದಿಟ್ಟು 9ನೇ ತರಗತಿ ವಿದ್ಯಾರ್ಥಿ ಶವವಾಗಿ ಪತ್ತೆ!..

Views: 651

ಕನ್ನಡ ಕರಾವಳಿ ಸುದ್ದಿ: 9ನೇ ತರಗತಿ ವಿದ್ಯಾರ್ಥಿಯೊಬ್ಬ ರಕ್ತದಲ್ಲಿ ಡೆತ್ ನೋಟ್ ಬರೆದಿಟ್ಟು ಶವವಾಗಿ ಪತ್ತೆಯಾಗಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದ ಖಾಸಗಿ ಶಾಲೆಯ ಬಳಿಯ ಜಮೀನಿನ ಪಕ್ಕದಲ್ಲೇ ಮರದ ಕೆಳಗೆ ವಿದ್ಯಾರ್ಥಿ ಶವ ಪತ್ತೆಯಾಗಿದೆ. ಮಡಿವಾಳಪ್ಪ ಚಬನೂರ (15) ಮೃತ ವಿದ್ಯಾರ್ಥಿ. ಬೋರಗಿ ಗ್ರಾಮದ ನಿವಾಸಿ.

ಮಡಿವಾಳಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೋಕಷರಿಗೆ ಮಾಹಿತಿ ನೀಡಿರೋ ಶಾಲಾ ಆಡಳಿತ ಮಂಡಳಿ. ಇದು ಆತ್ಮಹತ್ಯೆಯಲ್ಲಾ ಕೊಲೆ ಎಂದು ಪೋಷಕರು ಆರೋಪ ಮಾಡುತ್ತಿದ್ದಾರೆ.

ಮೃತ ವಿದ್ಯಾರ್ಥಿಯ ಬ್ಯಾಗ್ ನಲ್ಲಿ ನೋಟ್ ಬುಕ್ ಪೇಜ್ ನಲ್ಲಿ ರಕ್ತದಲ್ಲಿ ಬರೆದಿರೋ ನೋಟ್ ಪತ್ತೆಯಾಗಿದ್ದು, ಅಪ್ಪ ಅವ್ವ …ನೂರು ವರ್ಷ ಸುಖವಾಗಿ ಬಾಳಿರಿ….ನನ್ನ ನೆನಪಿಸಬೇಡಿರಿ…ನಾನು ಸುಖವಾಗಿ ಇರುತ್ತೇನೆಂದು ಬರೆದಿರೋ ಪುಟ ಸಿಕ್ಕಿದೆ.ಇದು  ವಿದ್ಯಾರ್ಥಿ ಸಾವಿನ ಕುರಿತು ಸಂಶಯ ಮೂಡಿಸಿದೆ.

ಘಟನಾ ಸ್ಥಳಕ್ಕೆ ತಾಳಿಕೋಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ನಡುವೆ ವಿದ್ಯಾರ್ಥಿ ಬರೆದಿಟ್ಟಿರುವ ಡೆತ್ ನೋಟ್ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು ಪ್ರಕರಣ ದಾಖಲಿಸಿಕೊಂಡಿರುವ ತಾಳಿಕೋಟೆ ಪೊಲೀಸರು ತನಿಖೆ ನಡೆಸಿದ್ದಾರೆ.

 

 

 

Related Articles

Back to top button