ಸಾಂಸ್ಕೃತಿಕ
“ಯುವ ನೃತ್ಯೋತ್ಸವ- 2024” ರಾಷ್ಟ್ರ ಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ಯುಕ್ತಿ ಉಡುಪ ಪ್ರಥಮ ಸ್ಥಾನ

Views: 46
ಕುಂದಾಪುರ: ಡಾ.ಅರುಣ್ ಕುಮಾರ್ ಮಯ್ಯ ಇವರ ಸ್ಮರಣಾರ್ಥ ನೃತ್ಯಾಂಗನ ಸಂಸ್ಥೆ ಮಂಗಳೂರು ಇದರ ವತಿಯಿಂದ ಇತ್ತೀಚೆಗೆ ಮಂಗಳೂರಿನ ಡಾನ್‌ಬಾಸ್ಕೋ ಹಾಲ್‌ನಲ್ಲಿ ನಡೆದ “ಯುವ ನೃತ್ಯೋತ್ಸವ 2024” ರಾಷ್ಟ್ರ ಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ಬಳ್ಕೂರಿನ ಯುಕ್ತಿ ಉಡುಪ “ಅರುಣೋದಯ ಪ್ರಶಸ್ತಿ”ಯೊಂದಿಗೆ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾಳೆ.
ಈಕೆ ಕುಂದಾಪುರದ ನೃತ್ಯ ವಸಂತ ನಾಟ್ಯಾಲಯದ ವಿದುಷಿ ಪ್ರವಿತಾ ಅಶೋಕ್‌ರವರ ಶಿಷ್ಯೆಯಾಗಿದ್ದು, ಇವರು ಬಳ್ಕೂರಿನ ರಾಘವ ಉಡುಪ ಮತ್ತು ಶ್ರೀಕಾಂತಿ ಉಡುಪರ ಪುತ್ರಿಯಾಗಿರುತ್ತಾಳೆ.






