ರಾಜಕೀಯ
ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ, ಜನರೇ ಆಶೀರ್ವಾದ ಮಾಡಿದ ಸರ್ಕಾರ 5-ವರ್ಷ ಕಾಲ ಮುಂದುವರಿಯುತ್ತೆ: ಸಿದ್ದರಾಮಯ್ಯ

Views: 21
ಕೋಲಾರ: ಲೋಕಸಭಾ ಚುನಾವಣೆಯ ನಂತರ ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ನಿಂತು ಹೋಗುತ್ತವೆ ಅಂತ ಬಿಜೆಪಿ ನಾಯಕರು ಹೇಳುತ್ತಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ಕೋಲಾರದಲ್ಲಿ ತಂದಾಗ ಅವರು ಸಿಡುಕಿದರು. ಐದು ವರ್ಷಗಳ ಸರಕಾರ ನಡೆಸಿ ಅಂತ ಜನ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ, ಕಾಂಗ್ರೆಸ್ 136 ಸೀಟು ಸಿಕ್ಕರೆ ಬಿಜೆಪಿಗೆ 66 ಮತ್ತ್ತು ಜೆಡಿಎಸ್ ಗೆ 19 ಸಿಕ್ಕಿವೆ, ಕಾಂಗ್ರೆಸ್ ಪಕ್ಷದ ವೋಟ್ ಶೇರ್ ಶೇಕಡ 43 ಇದ್ದರೆ ಬಿಜೆಪಿಯದು ಶೇಕಡಾ 36 ಮಾತ್ರ, ಅವರಿಗಿಂತ 7 ಪರ್ಸೆಂಟ್ ಹೆಚ್ಚು ಮತ ನಾವು ಗಳಿಸಿದ್ದೇವೆ, ಮುಂದೆ ನೋಡ್ತಾ ಇರಿ ಇನ್ನೂ ಬಹಳಷ್ಟು ಜನ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂದ ಸಿದ್ದರಾಮಯ್ಯ ನಮ್ಮ ಸರ್ಕಾರದ ಯೋಜನೆ 5 ವರ್ಷಗಳ ಕಾಲ ಮುಂದುವರಿಯುತ್ತವೆ ಅಂತ ಹೇಳಿದರು.






