ಸಾಂಸ್ಕೃತಿಕ

ಯಕ್ಷಗಾನ ಕಲಾವಿದ ವಿಶಾಲ್‌ ಜೈನ್‌ ವಾಮದಪದವು ನಿಧನ

Views: 109

ಮಂಗಳೂರು: ಯಕ್ಷಗಾನ ಕಲಾವಿದ ವಿಶಾಲ್‌ ಜೈನ್‌ (ವಿ.ಕೆ. ಜೈನ್)‌ ವಾಮದಪದವು (47) ನಿಧನರಾಗಿದ್ದಾರೆ. ಚೆನ್ನೈತ್ತೋಡಿ ಗ್ರಾಮದ ಅಂದ್ರಳಿಕೆ, ಅಂತರಗುತ್ತು ನಿವಾಸಿ ಮುನಿರಾಜ ಚೌಟರ ಪುತ್ರ ವಿಶಾಲ್‌ ಜೈನ್‌ ವಾಮದಪದವು ಸೋಮವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳದರು.

ಯಕ್ಷಗಾನಗಳಲ್ಲಿ ಹಾಸ್ಯ ಕಲಾವಿದರಾಗಿದ್ದ ವಿಶಾಲ್‌ ಜೈನ್‌ ತಂದೆ, ತಾಯಿ, ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ. ಬೆಂಕಿನಾಥೇಶ್ವರ ಮೇಳ, ಸಸಿಹಿತ್ಲು ಮೇಳ, ಸುಂಕದಕಟ್ಟೆ ಮೇಳಗಳಲ್ಲಿ ಅವರು ಸೇವೆ ಸಲ್ಲಿಸಿದ್ದರು. ಪ್ರಸ್ತುತ ಬಪ್ಪನಾಡು ಮೇಳದಲ್ಲಿ ಕಲಾ ಸೇವೆ ಸಲ್ಲಿಸುತ್ತಿದ್ದರು. ರಂಗಭೂಮಿಯಲ್ಲೂ ಅವರು ತೊಡಗಿಸಿಕೊಂಡಿದ್ದರು.

Related Articles

Back to top button
error: Content is protected !!