ಸಾಂಸ್ಕೃತಿಕ
ಯಕ್ಷಗಾನ ಅಕಾಡೆಮಿಗೆ ವಿದ್ಯಾಧರ ಜಲವಳ್ಳಿ ನೇಮಕ

Views: 101
ಕುಂದಾಪುರ: ರಾಜ್ಯ ಯಕ್ಷಗಾನ ಅಕಾಡೆಮಿಗೆ ಬಡಗು ತಿಟ್ಟಿನ ಹೆಸರಾಂತ ಯಕ್ಷಗಾನ ಕಲಾವಿದ ವಿದ್ಯಾಧರ ಜಲವಳ್ಳಿ ನೇಮಕಗೊಂಡಿದ್ದಾರೆ.

ಜಲವಳ್ಳಿ ವೆಂಕಟೇಶ್ ರಾವ್ ಅವರ ಪುತ್ರ ಬಡಗುತಿಟ್ಟಿನಲ್ಲಿ ಬಹು ಬೇಡಿಕೆಯ ಕಲಾವಿದ ಮಣೂರು ಮಯ್ಯ ಪ್ರತಿಷ್ಠಾನದ ಜಲವಳ್ಳಿ 25 ಅದ್ದೂರಿ ಸನ್ಮಾನ ಬೆಂಗಳೂರು, ಕರ್ನಾಟಕ ಸಂಘ ಮುಂಬಯಿ, ಹೈದರಾಬಾದ್, ಉಡುಪಿ, ಮಂಗಳೂರು ಹೀಗೆ ಹಲವು ಕಡೆಗಳಲ್ಲಿ ಸಾವಿರಾರು ಸನ್ಮಾನ. ಯಕ್ಷ ಕಲಾಧರ ಪ್ರಶಸ್ತಿ, ಯಕ್ಷರಾಜ ಪ್ರಶಸ್ತಿ ಹೀಗೆ ಹಲವು ಸಂಘ ಸಂಸ್ಥೆಗಳು ಇವರ ಯಕ್ಷಗಾನ ಸಾಧನೆ ಗುರುತಿಸಿ ಸನ್ಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ವಿದ್ಯಾಧರ ಜಲವಳ್ಳಿ ಅವರು ಪುರುಷ, ಪುಂಡು ವೇಷದ ಪಾತ್ರಗಳಲ್ಲಿ ಪ್ರಸಿದ್ಧರಾದ ಅವರು ಮೂರು ದಶಕಗಳ ಕಾಲ ತಮ್ಮ ಕಲಾ ಸೇವೆಯಲ್ಲಿ ಅಪಾರ ಅಭಿಮಾನಿಗಳನ್ನು ಪಡೆದಿದ್ದಾರೆ.ಅವರ ಆಯ್ಕೆಗೆ ಯಕ್ಷಗಾನ ಕಲಾ ಪ್ರೇಮಿಗಳಿಗೆ ಸಂತಸ ತಂದಿದೆ






