ಶಿಕ್ಷಣ
ಮೇ. 20,21 : ಸಿಇಟಿ ಪರೀಕ್ಷೆ

Views: 28
ಕುಂದಾಪುರ : ಮೇ. 20,21 ರಂದು ಸಿಇಟಿ ಪರೀಕ್ಷೆಗಳು ನಡೆಯಲಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 27 ಕೇಂದ್ರ ಮತ್ತು ಉಡುಪಿ 12 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ದ. ಕ. ಡಿಡಿಪಿಯು ಜಯಣ್ಣ ಉಡುಪಿ ಜಿ. ಪ. ಸಿಇಒ ಪ್ರಸನ್ನ ಎಚ್. ತಿಳಿಸಿದ್ದಾರೆ.
ದ. ಕ. ಜಿಲ್ಲೆಯಿಂದ 16,113 ಮತ್ತು ಉಡುಪಿ ಜಿಲ್ಲೆಯಿಂದ 5,712 ವಿದ್ಯಾರ್ಥಿಗಳು, ಒಟ್ಟು 21,825 ಮಂದಿ ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ.
ಪರೀಕ್ಷಾ ಕೇಂದ್ರದೊಳಗೆ ವಾಚ್ ಸಹಿತ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರವಂತಿಲ್ಲ, ತುಂಬು ತೋಳಿನ ಶಟ್೯ ಹಾಗೂ ಆಭರಣಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ.