ಮಿಸ್ ಯೂನಿವರ್ಸ್ ಇಂಡಿಯಾ-2024 ಕಿರೀಟ ಮುಡಿಗೇರಿಸಿಕೊಂಡ ರಿಯಾ ಸಿಂಘಾ

Views: 105
ಮಿಸ್ ಯೂನಿವರ್ಸ್ ಇಂಡಿಯಾ-2024 ಸ್ಪರ್ಧೆಯಲ್ಲಿ ರಿಯಾ ಸಿಂಘಾ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
19 ವರ್ಷದ ಯುವತಿ ರಿಯಾ ರಾಜಸ್ಥಾನದ ಜೈಪುರದಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಿಸಿದ್ದರು. ಈ ವೇಳೆ ಎಲ್ಲರ ಗಮನ ಸೆಳೆದ ಯುವತಿ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಗುಜರಾತ್ ಮೂಲಕ ರಿಯಾ ಸಿಂಘಾ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟ ಗೆದ್ದ ಬಳಿಕ ಮಾತನಾಡಿದ್ದು, ‘ಇಂದು ಪ್ರಶಸ್ತಿ ಗೆದ್ದ ನಂತರ ನಾನು ಕೃತಜ್ಞನಾಗಿದ್ದೇನೆ. ಈ ಮಟ್ಟಕ್ಕೆ ಬರಲು ತುಂಬಾ ಕಷ್ಟಪಟ್ಟಿದ್ದೇನೆ. ಅಲ್ಲಿ ನಾನು ಕಿರೀಟಕ್ಕೆ ಅರ್ಹನೆಂದು ಪರಿಗಣಿಸಿದೆ. ಹಿಂದಿನ ವಿಜೇತರಿಂದ ನಾನು ತುಂಬಾ ಸ್ಫೂರ್ತಿ ಪಡೆದಿದ್ದೇನೆ’ ಎಂದು ಹೇಳಿದ್ದಾರೆ.
ಬಾಲಿವುಡ್ ನಟಿ ಊರ್ವಶಿ ರೌಟೇಲರವರು ರಿಯಾರವರಿಗೆ ಕಿರೀಟ ತೊಡಿಸಿದರು. ಬಳಿಕ ಮಾತನಾಡಿದ ಅವರು, ‘ಎಲ್ಲಾ ಹುಡುಗಿಯರ ಭಾವನೆಗಳ ಬಗ್ಗೆ ತಿಳಿದಿದೆ. ವಿಜೇತರು ಅದ್ಭುತವಾಗಿದ್ದಾರೆ. ವಿಶ್ವ ಸುಂದರಿಯ ಜಾಗತಿಕ ವೇದಿಕೆಯಲ್ಲಿ ನಮ್ಮ ದೇಶವನ್ನು ಉತ್ತಮವಾಗಿ ಪ್ರತಿನಿಧಿಸುತ್ತಾರೆ ಎಂದು ಹೇಳಿದ್ದಾರೆ.







