ಕೃಷಿ
ಮಳೆ ಇಲ್ಲದೆ ಬೆಳೆ ನಾಶ :ರೈತ ಸಾವಿಗೆ ಶರಣು

Views: 0
ಮಳೆ ಇಲ್ಲದೇ ಬೆಳೆ ನಾಶವಾದ ಕಾರಣ ಮನನೊಂದ ರೈತ ಸಾವಿಗೆ ಶರಣಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಚಿಕ್ಕನಲ್ಲೂರು ಗ್ರಾ ನಾವುಮದಲ್ಲಿ ನಡೆದಿದೆ.
ಪರಮೇಶ್ವರಪ್ಪ (52) ಮೃತಪಟ್ಟವರಾಗಿದ್ದಾರೆ.
3 ಎಕರೆ ಜಮೀನನಲ್ಲಿ ಹಾಕಿದ್ದ ಈರುಳ್ಳಿ ಬೆಳೆ ಸಂಪೂರ್ಣವಾಗಿ ನಾಶವಾದ ಕಾರಣ, ಬೆಳೆಯನ್ನು ನಂಬಿ ಮಾಡಿದ್ದ ಸಾಲವನ್ನು ತೀರಿಸುವುದು ಹೇಗೆ ಎಂಬ ಚಿಂತೆಯಿಂದ ಮನೆಯಲ್ಲೇ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.
ಪರಮೇಶ್ವರಪ್ಪರವರು 3 ಎಕರೆ ಜಮೀನನಲ್ಲಿ ಹಾಕಿದ್ದ ಈರುಳ್ಳಿ ಬೆಳೆ ಬೆಳೆದಿದ್ದರು. ಇದಕ್ಕಾಗಿ ಬ್ಯಾಂಕ್, ಬಡ್ಡಿ ಹಾಗೂ ಕೈಸಾಲ ಸೇರಿ 5 ಲಕ್ಷ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ಗುರುವಾರ ಗಿರಿಯಾಪುರದ ರೈತ ಸತೀಶ್ ಕೂಡ ಆತ್ಮಹತ್ಯೆಗೆ ಶರಣಾಗಿದ್ರು ಇದೀಗ ಮತ್ತೋರ್ವ ರೈತ ಸಾವಿಗೆ ಶರಣಾಗಿದ್ದ. ಘಟನೆ ಸಂಬಂಧ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ






