ಸಾಂಸ್ಕೃತಿಕ
ಮಳೆ ಆರ್ಭಟದಿಂದ ‘ಕಾಂತಾರ 1’ ಶೂಟಿಂಗ್ ಬೇಕ್..ಮತ್ತೆ ಭರದಿಂದ ಚಿತ್ರೀಕರಣ ಶುರು ಮಾಡಿದ ರಿಷಬ್ ಶೆಟ್ಟಿ

Views: 80
ಭಾರಿ ಸುರಿಯುತ್ತಿರುವ ಮಳೆಯಿಂದಾಗಿ ‘ಕಾಂತಾರ ಚಾಪ್ಟರ್ 1’ ಚಿತ್ರೀಕರಣಕ್ಕೆ ಬ್ರೇಕ್ ನೀಡಲಾಗಿತ್ತು, ಮಳೆ ಆರ್ಭಟ ಕಡಿಮೆಯಾದ ಹಿನ್ನೆಲೆಯಲ್ಲಿ ಕುಂದಾಪುರದ ರಿಷಬ್ ಶೆಟ್ಟಿ ಮತ್ತೆ ಶುರು ಮಾಡಿದ್ದಾರೆ.
‘ಕಾಂತಾರ’ ಸಿನಿಮಾ ಸಕ್ಸಸ್ ನಂತರ ‘ಕಾಂತಾರ ಚಾಪ್ಟರ್ 1’ ಕೂಡ ಉತ್ತಮ ಕಥೆಯೊಂದಿಗೆ ಅದ್ಧೂರಿಯಾಗಿ ತರಲು ತೆರೆಮರೆಯಲ್ಲಿ ಕೆಲಸ ನಡೆಯುತ್ತಿದೆ. ಇತ್ತೀಚೆಗೆ ಮಳೆಯ ಅವಾಂತರದಿಂದ ‘ಕಾಂತಾರ 1’ ಸಿನಿಮಾದ ಚಿತ್ರೀಕರಣಕ್ಕೆ ಬ್ರೇಕ್ ಕೊಟ್ಟಿದ್ದರು. ಮಳೆ ಕಮ್ಮಿಯಾದ ಹಿನ್ನೆಲೆ ಮತ್ತೆ ಶೂಟಿಂಗ್ ಭರದಿಂದ ನಡೆಯುತ್ತಿದೆ.

‘ಕಾಂತಾರ ಚಾಪ್ಟರ್ 1’ ಸಿನಿಮಾದ ರಿಷಬ್ ಫಸ್ಟ್ ಲುಕ್‌ಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ವಿಭಿನ್ನ ಅವತಾರದಲ್ಲಿ ರಿಷಬ್ ಮಿಂಚಿದ್ದರು. ಹಾಗಾಗಿ ಈ ಸಿನಿಮಾದ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.
ರಿಷಬ್ ನಟಿಸಿ, ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಹೊಂಬಾಳೆ ಸಂಸ್ಥೆ ಬಂಡವಾಳ ಹೂಡುತ್ತಿದೆ. ಈ ವರ್ಷದ ಅಂತ್ಯದಲ್ಲಿ ಸಿನಿಮಾ ರಿಲೀಸ್ ಆಗಲಿದೆ.






