ಮರವಂತೆಯಲ್ಲಿ ಚಿನ್ನಾಭರಣ ಅಂಗಡಿಗೆ ನುಗ್ಗಿ ಕಳ್ಳತನ
Views: 70
ಕನ್ನಡ ಕರಾವಳಿ ಸುದ್ದಿ: ಬೈಂದೂರು- ಮರವಂತೆ ಗ್ರಾಮದ ಮಾರುತಿ ಕಾಂಪ್ಲೆಕ್ಸ್‌ನಲ್ಲಿರುವ ‘ಮಾಂಗಲ್ಯ’ ಚಿನ್ನದ ಅಂಗಡಿಯಲ್ಲಿ ಕಳ್ಳತನ ನಡೆದಿದ್ದು, ಸುಮಾರು ₹1.45 ಲಕ್ಷ ಮೌಲ್ಯದ ಬೆಳ್ಳಿ ಹಾಗೂ ನಗದು ಕಳವಾಗಿರುವ ಘಟನೆ ಬೆಳಕಿಗೆ ಬಂದಿದೆ.
ಮರವಂತೆ ಗ್ರಾಮದ ಹರಿಶ್ಚಂದ್ರ ರಸ್ತೆಯ ಚಳ್ಳಿಕಳ್ಳಿ ನಿವಾಸಿ ವಿಶ್ವನಾಥ ಅವರು ಈ ಅಂಗಡಿಯನ್ನು ನಡೆಸುತ್ತಿದ್ದು, ಜುಲೈ 4ರಂದು ರಾತ್ರಿ 9.00 ಗಂಟೆಯಿಂದ ಜುಲೈ 5ರಂದು ಬೆಳಿಗ್ಗೆ 5.40 ಗಂಟೆಯ ನಡುವಿನ ಅವಧಿಯಲ್ಲಿ ಕಳ್ಳರು ಅಂಗಡಿಯ ಶಟರ್ ಮುರಿದು ಒಳನುಗ್ಗಿದ್ದಾರೆ.
ಬಳಿಕ ಅಂಗಡಿಯ ಡ್ರಾವರ್ ಹಾಗೂ ಕ್ಯಾಬಿನ್‌ನಲ್ಲಿದ್ದ ಸುಮಾರು 600 ಗ್ರಾಂ ಬೆಳ್ಳಿಗಟ್ಟಿ (ಅಂದಾಜು ಮೌಲ್ಯ ₹1,44,000) ಹಾಗೂ ₹1,000 ನಗದನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.
ಈ ಸಂಬಂಧ ವಿಶ್ವನಾಥ ಅವರು ನೀಡಿದ ದೂರಿನ ಆಧಾರದಲ್ಲಿ ಗಂಗೊಳ್ಳಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ವೃತ್ತಿಪರ ಕಳ್ಳರ ಕೃತ್ಯ ?
ಈ ಕಳ್ಳತನಕ್ಕೆ ಗ್ಯಾಸ್ ಕಟ್ಟರ್ ಬಳಸಿ ಅಂಗಡಿಯ ಬಾಗಿಲನ್ನು ತುಂಡರಿಸಿರುವುದು, ಅಕ್ಕ- ಪಕ್ಕದ ಅಂಗಡಿಗಳ ಸಿಸಿಟಿವಿಗಳನ್ನು ಜಖಂಗೊಳಿಸಿರುವುದು, ಭಾರೀ ಮಳೆ ಬರುವ ಸಮಯದಲ್ಲಿಯೇ ಕೃತ್ಯ ನಡೆದಿರುವುದನ್ನು ಕಂಡಾಗ ಇದು ವೃತ್ತಿಪರ ಕಳ್ಳರೇ ನಡೆಸಿರುವುದು ಅನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.






