ಇತರೆ

ಮನೆಯ ಸಮೀಪದ ಕೆರೆಗೆ ಬಿದ್ದು ತಾಯಿ, ಎರಡು ವರ್ಷದ ಮಗು ಸಾವು

Views: 65

ಕನ್ನಡ ಕರಾವಳಿ ಸುದ್ದಿ: ಉಕ್ಕಿನಡ್ಕ ಸಮೀಪದ ಏಳ್ತಾನದ ಮನೆಯೊಂದರ ಬಳಿಯಿರುವ ಅಡಿಕೆ ತೋಟದ ಕೆರೆಗೆ ಬಿದ್ದು ತಾಯಿ ಹಾಗೂ ಎರಡು ವರ್ಷದ ಮಗು ಸಾವಿಗೀಡಾದ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ.

ಈಶ್ವರ ನಾಯ್ಕ ಅವರ ಪತ್ನಿ ಪರಮೇಶ್ವರಿ(42) ಹಾಗೂ ಪುತ್ರಿ ಪದ್ದಿನಿ (2) ಮೃತಪಟ್ಟವರು.

ಪರಮೇಶ್ವರಿ ಅವರ ಪತಿ ಬೆಳಿಗ್ಗೆ ಮನೆಯಿಂದ ಹೊರಕ್ಕೆ ಹೋಗಿದ್ದರು. ಅವರು ಸಂಜೆ ವಾಪಸ್ ಮನೆಗೆ ಬಂದಾಗ ತಾಯಿ ಮತ್ತು ಮಗು ಅಲ್ಲಿ ಕಾಣದೇ ಇದ್ದಾಗ ಪರಿಸರದಲ್ಲಿ ಹುಡುಕಾಡಿದರು. ಈ ವೇಳೆ ಕೆರೆಯಲ್ಲಿ ತಾಯಿ-ಮಗು ಪತ್ತೆಯಾಗಿದ್ದಾರೆ.

ವಿಷಯ ತಿಳಿದ ಕೂಡಲೇ ಸ್ಥಳೀಯರು ಅವರನ್ನು ಮೇಲಕ್ಕೆತ್ತಿ ಕಾಸರಗೋಡು ಆಸ್ಪತ್ರೆಗೆ ಕೊಂಡೊ ಯ್ದರು. ಅಲ್ಲಿಗೆ ತಲುಪುವ ಮೊದಲೇ ಇವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಸಂಶಯಾಸ್ಪದ ಸಾವು ಪ್ರಕರಣ ದಾಖಲು

ಪರಮೇಶ್ವರಿ ಮತ್ತು ಬಾಲಕಿ ಪದ್ಮನಿ ಸಾವಿನ ಬಗ್ಗೆ ಸಂಶಯಾಸ್ಪದ ಸಾವು ಎಂಬುದಾಗಿ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

 

Related Articles

Back to top button
error: Content is protected !!