ಇತರೆ

ಮದುವೆಗೆ ಕೆಲವೇ ಗಂಟೆಗಳ ಮೊದಲು ಅಕ್ಕ-ತಂಗಿಯರಿಬ್ಬರು ಸಾವಿಗೆ ಶರಣು 

Views: 150

ಕನ್ನಡ ಕರಾವಳಿ ಸುದ್ದಿ: ಮದುವೆಗೆ ಕೆಲವೇ ಗಂಟೆಗಳ ಮೊದಲು ಅಕ್ಕ-ತಂಗಿಯರಿಬ್ಬರು ಸಾವಿಗೆ ಶರಣಾದ ಘಟನೆ ರಾಜಸ್ಥಾನಲ್ಲಿ ನಡೆದಿದೆ.

ಮೃತರನ್ನು ಮನೈಗ್ರಾಮದ ಶೋಭಾ (25) ಮತ್ತು ವಿಮಲಾ (23) ಎಂದು ಗುರುತಿಸಲಾಗಿದೆ.ಜೋಧಾಪುರದ ಈ ಸಹೋದರಿಯರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದ ಮದುವೆಯ ಸಂಭ್ರಮದಲ್ಲಿದ್ದ ಮನೆ ಈಗ ಶೋಕ ಸಾಗರದಲ್ಲಿ ಮುಳುಗಿದೆ.

ಫೆಬ್ರವರಿ 21ರಂದು ಸಹೋದರಿಯರ ಮದುವೆ ನಿಗದಿಪಡಿಸಲಾಗಿತ್ತು. ಫೆಬ್ರವರಿ 20ರ ಮಧ್ಯರಾತ್ರಿ ತನಕ ಮನೆಯಲ್ಲಿ ಮದುವೆ ಪೂರ್ವ ಶಾಸ್ತ್ರ ನೆರವೇರಿತ್ತು. ಇನ್ನು ಇಬ್ಬರು ಮದುಮಕ್ಕಳು ನಿದ್ದೆಗೆಂದು ರೂಮ್‌ಗೆ ತೆರಳಿ ಸಾವಿಗೆ ಶರಣಾಗಿದ್ದರು. ಮನೆಯವರು ಬೆಳಗ್ಗೆ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

Related Articles

Back to top button
error: Content is protected !!