ಶಿಕ್ಷಣ

ಮದರ್ ತೆರೇಸಾ ಶಿಕ್ಷಣ ಸಂಸ್ಥೆ: ಶಿಕ್ಷಕರಿಗೆ ಪರಿಣಾಮಕಾರಿ ಬೋಧನಾ ಕೌಶಲ್ಯ ಕಾರ್ಯಾಗಾರ

Views: 115

ಕುಂದಾಪುರ :ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಶಂಕರನಾರಾಯಣ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್ ನಲ್ಲಿ ಮೇ.24 ರಂದು  ರೌಪಿಯ ಸಭಾಂಗಣದಲ್ಲಿ ಕಿಂಡರ್ಗಾಟನ್, ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ತರಗತಿ ಶಿಕ್ಷಕರಿಗೆ ‘ಶಿಕ್ಷಣದಲ್ಲಿ ಪರಿಣಾಮಕಾರಿ ಬೋಧನೆ ಮತ್ತು ಗುಣಾತ್ಮಕ ಶಿಕ್ಷಣ’ದ ಕುರಿತು ತರಬೇತಿ ನಡೆಯಿತು.

ಪರಿಸರತಜ್ಞೆ, ಬಹುಮುಖ ಪ್ರತಿಭೆ, ರಾಷ್ಟ್ರಮಟ್ಟದ ವಿಶೇಷ ಸಂಪನ್ಮೂಲ ತರಬೇತಿ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ  ಶ್ರೀಮತಿ ಎಸ್ ಪಲ್ಲವಿ ಇವರು ವಿವಿಧ ಪ್ರಾತ್ಯಕ್ಷಿಕೆಗಳ ಮೂಲಕ ಶಿಕ್ಷಣದಲ್ಲಿ ಪರಿಣಾಮಕಾರಿ ಬೋಧನೆ ಮತ್ತು ಗುಣಾತ್ಮಕ ಶಿಕ್ಷಣದ ಕುರಿತು ತರಬೇತಿ ನೀಡಿದರು.ಜೊತೆಯಲ್ಲಿ ಇಂದಿನ ತಾಂತ್ರಿಕ ಯುಗದಲ್ಲಿ ಶಿಕ್ಷಣ ಕ್ಷೇತ್ರವು ಪೈಪೋಟಿಯಿಂದ ಕೂಡಿದ್ದು, ಶಿಕ್ಷಕರು ವಿದ್ಯಾರ್ಥಿಗಳಿಂದ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ ಆದ್ದರಿಂದ ವಿದ್ಯಾರ್ಥಿ ಸ್ನೇಹಿ ಶಿಕ್ಷಣ ಅತ್ಯಗತ್ಯ ಮತ್ತು ಈ ದಿಶೆಯತ್ತ ಶಿಕ್ಷಕರು ಸಂಯಮದಿಂದ ಸದಾ ಕ್ರಿಯಾಶೀಲರಾಗಿರಬೇಕು ಎಂದು ಶಿಕ್ಷಕರಿಗೆ ಪ್ರಾಯೋಗಿಕವಾಗಿ ಉದಾಹರಣೆಗಳ ಮೂಲಕ ಸೂಕ್ತ ಮಾರ್ಗದರ್ಶನ ನೀಡಿದರು.

ಎಲ್ಲಾ ಶಿಕ್ಷಕರು ಅತ್ಯಂತ ಉತ್ಸಾಹದಿಂದ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ಆಡಳಿತ ಮಂಡಳಿಯ ಅಧಿಕಾರಿಗಳಾದ ಕುಮಾರಿ ಶಮಿತಾ ರಾವ್, ಕುಮಾರಿ ರೆನಿಟಾ ಲೋಬೊ, ಮತ್ತು ಮುಖ್ಯಶಿಕ್ಷಕ ರವಿದಾಸ್ ಶೆಟ್ಟಿ  ಉಪಸ್ಥಿತರಿದ್ದರು.

Related Articles

Back to top button