ಶಿಕ್ಷಣ

ಮದರ್ ತೆರೇಸಾ ಆಂಗ್ಲ ಮಾಧ್ಯಮ ಶಾಲೆಗೆ ಮುಖ್ಯ ಶಿಕ್ಷಕರಾಗಿ ಪ್ರಶಸ್ತಿ ಪುರಸ್ಕ್ರತ ರವಿದಾಸ್ ಶೆಟ್ಟಿ ನೇಮಕ

Views: 297

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಮದರ್ ತೆರೇಸಾ ಮೆಮೋರಿಯಲ್ ಟ್ರಸ್ಟ್ (ರಿ) ಶಂಕರನಾರಾಯಣ ಪ್ರವರ್ತಿತ ಮದರ್ ತೆರೇಸಾ ಆಂಗ್ಲ ಮಾಧ್ಯಮ ಶಾಲೆಗೆ ಶಿಕ್ಷಣ ಕ್ಷೇತ್ರದಲ್ಲಿ ಹತ್ತು ಹಲವು ಪ್ರಶಸ್ತಿಯೊಂದಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ,ಕಾರವಾರ ಮತ್ತು ಉಡುಪಿ ಜಿಲ್ಲೆ, ಆದರ್ಶ ಶಿಕ್ಷಕ ಉಡುಪಿಜಿಲ್ಲೆ, ಸಾಧಕ ಪ್ರಶಸ್ತಿ ಜೆ ಸಿ ಐ ಉಪ್ಪುಂದ,, ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಶುಭದಾ ಶಾಲೆಗಳು, ಹಾಗೂ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕೇರಳ ಸುದೀರ್ಘ 25ವರ್ಷಗಳ ಸೇವಾನುಭವ ಹೊಂದಿರುವ ಉಪ್ಪುಂದದ ಶ್ರೀ ರವಿದಾಸ್ ಶೆಟ್ಟಿ- MA, MEd. ನೂತನ ಮುಖ್ಯ ಶಿಕ್ಷಕರಾಗಿ ಅಧಿಕಾರ ಪ್ರಧಾನ ಮಾಡಲಾಯಿತು.

ಆಯ್ಕೆಯಾದ ನೂತನ ಮುಖ್ಯ ಶಿಕ್ಷಕರಿಗೆ ಸಂಸ್ಥೆಯ ಆಡಳಿತ ಮಂಡಳಿ, ಬೋಧಕ ಮತ್ತು ಬೋಧಕೇತರ ವೃಂದ,ಪಾಲಕರು ಶುಭ ಹಾರೈಸಿದ್ದಾರೆ.

ಮುಖ್ಯ ಶಿಕ್ಷಕರಾಗಿ ಅಧಿಕಾರ ಸ್ವೀಕರಿಸಿದ ಈ ಸಂದರ್ಭದಲ್ಲಿ ಶ್ರೀ ರವಿದಾಸ್ ಶೆಟ್ಟಿ ಸಂಸ್ಥೆಯ ಸರ್ವತೋಮುಖ ಏಳಿಗೆಗಾಗಿ ಪ್ರಾಮಾಣಿಕ, ನಿಷ್ಠೆಯಿಂದ ಸೇವೆ ಸಲ್ಲಿಸಿ, ಸಂಸ್ಥೆಯ ಉತ್ತರೋತ್ತರ ಅಬಿವೃದ್ಧಿಗೆ ಶೃಮಿಸುವುದಾಗಿ   ಭರವಸೆ ನೀಡಿದ್ದಾರೆ.

Related Articles

Back to top button