ಶಿಕ್ಷಣ

ಮದರ್ಸ್ ಡೇಗೆ ಅಮ್ಮನನ್ನು ಕರೆದು ಕೊಂಡು ಬಾ ಅಂದ್ರು.. ಅಪ್ಪನೇ ಅಮ್ಮನ ವೇಷದಲ್ಲಿ ಶಾಲೆಗೆ ಬಂದ್ರು..!

Views: 0

ಮದರ್ಸ್​ ಡೇ ದಿನ ಅಮ್ಮನನ್ನು ಶಾಲೆಗೆ ಕರೆದುಕೊಂಡು ಬಾ ಎಂದಿದ್ದಾರೆ. ಅಮ್ಮನೇ ಇಲ್ಲದ ಮಗಳು ಎಲ್ಲಿಂದ ಆಕೆಯನ್ನು ಕರೆತಂದಾಳು?; ಮಗಳ ಮನಸ್ಸನ್ನು ಅರ್ಥ ಮಾಡಿಕೊಂಡ ತಂದೆ, ತಾನೇ ತಾಯಿಯಂತೆ ವೇಷ ಹಾಕಿಕೊಂಡು ಮಗಳ ಶಾಲೆಗೆ ಹೋಗಿದ್ದಾನೆ. ಅಪ್ಪನೊಳಗೆ ಅಮ್ಮನನ್ನೂ ಕಂಡ ಮಗಳು ಸಂತೋಷದಿಂದ ಆತನನ್ನು ಅಪ್ಪಿಕೊಂಡಿದ್ದಾಳೆ.

ಸಮಾಜಕ್ಕಿಂತ ನೀವು ಮಗಳ ಬಗ್ಗೆ ಗಮನ ಕೊಟ್ಟಿದ್ದೀರಿ, ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಯಾರಾದರೂ ತಂದೆಯಾಗಬಹುದು, ಆದರೆ ಇಂಥ ತಂದೆಯಾಗಬೇಕೆಂದರೆ ವಿಶೇಷ ವ್ಯಕ್ತಿತ್ವ ಇರಬೇಕು. ನನಗೆ ಕಣ್ಣೀರನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಮಗು ದೇವರಿಂದ ಆಶೀರ್ವದಿಸಲ್ಪಟ್ಟಿದೆ. ನಾನು ನೋಡಿದ ಈತನಕದ ವಿಡಿಯೋಗಳಲ್ಲಿ ಇದು ಅತ್ಯಂತ ಸುಂದರವಾಗಿದೆ. ಒಬ್ಬಂಟಿ ಪೋಷಕರಿಗೆ ಇದೋ ಗೌರವ.

ಮಕ್ಕಳಿಗಾಗಿ ಬದುಕನ್ನು ಮೀಸಲಿಡುವ ಸಿಂಗಲ್ ಪೇರೆಂಟ್​ಗೆ ಶುಭವಾಗಲಿ. ಈ ಮಗುವಿನ ತಾಯಿ ಸ್ವರ್ಗದಲ್ಲಿ ನಗುತ್ತಿರಬೇಕು. ಈ ಮಗು ತನ್ನ ಬದುಕಿನಲ್ಲಿ ಸರಿಯಾದ ವ್ಯಕ್ತಿಯನ್ನು ಪಡೆದಿದೆ… ಹೀಗೆ ನೆಟ್ಟಿಗರನೇಕರು ಈ ವಿಡಿಯೋದಡಿ ಪ್ರತಿಕ್ರಿಯಿಸಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಗ್ರೇಟ್​ ಡ್ಯಾಡಿ ಎಂದಿದ್ದಾರೆ ನೆಟ್ಟಿಗರು. ಎಲ್ಲರಿಗೂ ಇಂಥ ಅಪ್ಪ ಸಿಗುವುದಿಲ್ಲ ಎಂದಿದ್ದಾರೆ ಒಬ್ಬರು. ಮಕ್ಕಳಿಗಾಗಿ ಏನನ್ನೂ ಮಾಡುವ ಇಂಥ ಅಪ್ಪನೋ ಅಮ್ಮನೋ ಇರುವುದು ಬಹಳ ವಿರಳ ಎಂದಿದ್ದಾರೆ ಇನ್ನೊಬ್ಬರು. ಇಂಥ ಅಪ್ಪಂದಿರ ತೋಳಲ್ಲಿರುವ ಮಕ್ಕಳು ಸದಾ ಸುರಕ್ಷಿತ ಎಂದಿದ್ದಾರೆ ಮತ್ತೊಬ್ಬರು.

Related Articles

Back to top button