ಇತರೆ
ಮಡಾಮಕ್ಕಿಯಲ್ಲಿ ಚೀಲದೊಳಗೆ ಅಡಗಿದ್ದ ವಿಷಕಾರಿ ಹಾವು ಕಡಿದು ಮಹಿಳೆ ಸಾವು
Views: 286
ಕನ್ನಡ ಕರಾವಳಿ ಸುದ್ದಿ: ಚೀಲದೊಳಗೆ ಅಡಗಿದ್ದ ವಿಷಕಾರಿ ಹಾವು ಕಡಿದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಡಿ. 9ರಂದು ಮಡಾಮಕ್ಕಿಯಲ್ಲಿ ಸಂಭವಿಸಿದೆ.
ಮಾಂಡಿ ಮೂರುಕೈಯ ನಿವಾಸಿ ಜಲಜಾಕ್ಷಿ ಶೆಟ್ಟಿ (76) ಮೃತಪಟ್ಟವರು.
ಸಹೋದರನ ಮನೆಯಲ್ಲಿ ವಾಸವಾಗಿದ್ದ ಜಲಜಾಕ್ಷಿ ಅವರು ತಲೆಯ ಕೂದಲಿಗೆ ಧರಿಸುವ ಚೌರಿಯನ್ನು ತೆಗೆಯಲೆಂದು ಚೀಲದ ಒಳಗೆ ಕೈ ಹಾಕಿದಾಗ ಅಲ್ಲಿ ಅಡಗಿದ್ದ ಹಾವು ಕಡಿಯಿತು. ಕೂಡಲೇ ಅವರನ್ನು ಮನೆಯವರು ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದರು. ಪರೀಕ್ಷಿಸಿದ ವೈದ್ಯರು ಜಲಜಾಕ್ಷಿ ಅದಾಗಲೇ ಕೊನೆಯುಸಿರೆಳೆದಿರುವುದಾಗಿ ತಿಳಿಸಿದರು. ಸಹೋದರ ಭಾಸ್ಕರ ಶೆಟ್ಟಿ ಅವರು ನೀಡಿರುವ ದೂರಿನಂತೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






