ಮಗುವಿನ ಆರಂಭ ಶಿಕ್ಷಣ-LKG,UKG -ವಿಶಿಷ್ಟ, ವಿಭಿನ್ನ, ವಿನೂತನ ಬೋಧನೆಗೆ “ಮದರ್ ತೆರೆಸಾ ಶಿಕ್ಷಣ ಸಂಸ್ಥೆ ದಾಖಲಾತಿ ಪ್ರಕ್ರಿಯೆ ಆರಂಭ”

Views: 87
ಉಡುಪಿ :ಜಿಲ್ಲೆಯ ಕುಂದಾಪುರ ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಶಂಕರನಾರಾಯಣದ ‘ಮದರ್ ತೆರೆಸಾ ಶಿಕ್ಷಣ ಸಂಸ್ಥೆ’ಯು 2024-25ನೆಯ ಸಾಲಿನ ದಾಖಲಾತಿ ಪ್ರಕ್ರಿಯೆಯು ಈಗಾಗಲೇ ಪ್ರಾರಂಭಗೊಂಡಿದೆ.
1998ರಲ್ಲಿ ಆರಂಭಗೊಂಡ ನಮ್ಮೀ ಸಂಸ್ಥೆ ಇದೀಗ 26 ಸಂವತ್ಸರಗಳನ್ನು ಪೂರೈಸಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ.
ಶಿಕ್ಷಣ ಸಂಸ್ಥೆಯ ಪೂರ್ವ ಪ್ರಾಥಮಿಕ ವಿಭಾಗದ LKG ಮತ್ತು UKG ತರಗತಿಗಳಲ್ಲಿ ವಿಭಿನ್ನ, ವಿಶೇಷ ಹಾಗೂ ವಿನೂತನ ಶೈಲಿಯ ಬೋಧನೆಯನ್ನು ಮಾಡುವುದರ ಮೂಲಕ 3ರಿಂದ 6 ವರ್ಷಗಳೊಳಗಿನ ಮಕ್ಕಳನ್ನು ಕಲಿಕೆಯತ್ತ ಆಕರ್ಷಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುತ್ತಿದೆ.
ಬಾಲ್ಯದ ಶಿಕ್ಷಣವು ಭವಿಷ್ಯದ ಎಲ್ಲಾ ಕಲಿಕೆಗೆ ಭದ್ರ ಅಡಿಪಾಯವಾಗಿ ಕಾರ್ಯನಿರ್ವಹಿಸುವ ಹೆಗ್ಗಳಿಕೆ ಪಡೆದ ಮದರ್ ತೆರೆಸಾ ಶಿಕ್ಷಣ ಸಂಸ್ಥೆಯ ವೈಶಿಷ್ಟ್ಯಗಳು;
- ಕೇವಲ 9,500 ರೂಪಾಯಿ ವಾರ್ಷಿಕ ಶುಲ್ಕದೊಂದಿಗೆ PRE-KG ಶಿಕ್ಷಣವನ್ನು ನೀಡಲಾಗುತ್ತಿದೆ.
- ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರಹಾಕುವ ಹಾಗೂ ಮಕ್ಕಳನ್ನು ಸದಾ ಕ್ರಿಯಾಶೀಲರನ್ನಾಗಿಸುವ ಉದ್ದೇಶದಿಂದ ಕಲಿಕೆಯಲ್ಲಿ ಹಲವು ಚಟುವಟಿಕೆಗಳೊಂದಿಗೆ ಪೂರಕ ಶಿಕ್ಷಣ ಕ್ರಮವನ್ನು ಅನುಸರಿಸಲಾಗುತ್ತಿದೆ.
- LKG ಯಿಂದಲೇ ಪುಟ್ಟ ಮಕ್ಕಳು ತುಂಬ ಇಷ್ಟಪಡುವ Cursive Writing, Drawing, Colouring, Art and Craft, Colour-Day Activities ಮುಂತಾದ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.
- ಪ್ರತಿದಿನ, ತರಗತಿ ಆರಂಭಕ್ಕೆ ಮೊದಲು, ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಮುಕ್ತವಾಗಿ ಹಾಗೂ ಅತ್ಯಂತ ಪ್ರೀತಿಯಿಂದ ಬೆರೆತು ಮಾತನಾಡಿ ಅವರ ಮನಸ್ಸನ್ನು ಉಲ್ಲಸಿತಗೊಳಿಸುತ್ತಾರೆ.
- ಗಾಯತ್ರಿ ಮಂತ್ರದೊಂದಿಗೆ ತರಗತಿಗಳು ಪ್ರಾರಂಭಗೊಳ್ಳುತ್ತವೆ.
- ಪೂರ್ವ ಪ್ರಾಥಮಿಕ ವಿಭಾಗದ ತರಗತಿಗಳು ವಿಸ್ತಾರವಾದ ಕೋಣೆಗಳನ್ನು ಹೊಂದಿದ್ದು ವಿದ್ಯಾರ್ಥಿಗಳಿಗೆ ಒತ್ತಡರಹಿತ ವಾತಾವರಣದಲ್ಲಿ ಕಲಿಕೆಗೆ ಅವಕಾಶ ಮಾಡಿ ಕೊಡಲಾಗಿದೆ.
- ವಿದ್ಯಾರ್ಥಿಗಳಿಗೆ ಎಲ್ಲ ವಿಷಯಗಳನ್ನು ನುರಿತ ಶಿಕ್ಷಕರು ಮನಮುಟ್ಟುವಂತೆ ಬೋಧನೆ.
- ಪುಟ್ಟ ಮಕ್ಕಳು ಶಿಕ್ಷಕರೊಂದಿಗೆ ಇಂಗ್ಲೀಷ್ ಭಾಷೆಯಲ್ಲಿ ಸಂವಹನ ನಡೆಸುವುದಕ್ಕೆ ವಿಶೇಷ ಪ್ರಾಮುಖ್ಯ ನೀಡಲಾಗುತ್ತಿದೆ.
- ಪುಟಾಣಿಗಳ ಜ್ಞಾನಾಭಿವೃದ್ಧಿಗಾಗಿ ಪ್ರತ್ಯೇಕವಾದ ಗ್ರಂಥಾಲಯ ವ್ಯವಸ್ಥೆ
- ವಿದ್ಯಾರ್ಥಿಗಳನ್ನು ಮುತುವರ್ಜಿಯಿಂದ ನೋಡಿಕೊಳ್ಳುವ ಸಲುವಾಗಿ ಶಿಕ್ಷಣ ಸಂಸ್ಥೆಯ ಪ್ರತಿ ಮಹಡಿಯಲ್ಲೂ ಸರ್ವಿಸ್ ಲೇಡೀಸ್ ವ್ಯವಸ್ಥೆ.
- ಮಕ್ಕಳ ಆರೋಗ್ಯದ ಕಡೆಗೆ ವಿಶೇಷ ಗಮನಹರಿಸಲು ಸುಸಜ್ಜಿತ ವಿಶ್ರಾಂತಿ ಕೊಠಡಿ ಲಭ್ಯ
- ಪ್ರತಿ ಮಹಡಿಯಲ್ಲೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ
- ನುರಿತ ನೃತ್ಯ ಗುರುಗಳನ್ನು ನೇಮಿಸಿಕೊಂಡು ಪುಟ್ಟ ಮಕ್ಕಳಿಗೆ ನೃತ್ಯ ತರಬೇತಿಯನ್ನೂ ನೀಡಲಾಗುತ್ತಿದೆ.
- ವಿದ್ಯಾರ್ಥಿಗಳು ಸದಾ ಕ್ರಿಯಾಶೀಲರಾಗಿರುವಂತೆ ನೋಡಿಕೊಳ್ಳಲು ಸುಸಜ್ಜಿತವಾದ ಒಳಾಂಗಣ ಆಟಗಳ ವ್ಯವಸ್ಥೆ
- ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರಹಾಕುವ ಉದ್ದೇಶದಿಂದ ಛದ್ಮವೇಷ ಸ್ಪರ್ಧೆ, ನೃತ್ಯ, ಹಾಡುವುದು, ಬಾಲರಾಧೆ, ಬಾಲಗೋಪಾಲ, ಸಾಮಾನ್ಯ ಜ್ಞಾನ ರಸಪ್ರಶ್ನೆ ಹಾಗೂ ಕ್ರೀಡಾ ಸ್ಪರ್ಧೆಗಳ ಆಯೋಜನೆ.
- ವಿದ್ಯಾರ್ಥಿಗಳನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರನ್ನಾಗಿಸಲು ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಯೋಗ ತರಗತಿಗಳನ್ನು ನಡೆಸಲಾಗುವುದು.
- ‘ಮಕ್ಕಳ ಲಾಲನೆ ಪಾಲನೆಯಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ’ – ಈ ವಿಷಯದ ಕುರಿತಾಗಿ ಪ್ರತಿವರ್ಷವೂ ಅಗತ್ಯ ಕಂಡಂತೆ ನುರಿತ ಮನ:ಶಾಸ್ತ್ರಜ್ಞರನ್ನು ಕರೆಸಿ ಶಿಕ್ಷಕರು ಮತ್ತು ಪೋಷಕರ ಜೊತೆ ಸಮಾಲೋಚನೆ ನಡೆಸಿ ತಮ್ಮ ಮಕ್ಕಳ ಕುರಿತಂತೆ ಪೋಷಕರಿಗಿರುವ ಗೊಂದಲಗಳನ್ನು ನಿವಾರಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ.
- ಪುಟಾಣಿಗಳ ಇಡೀ ವರ್ಷದ ಪಠ್ಯ ಹಾಗೂ ಪಠ್ಯೇತರ ಸಾಧನೆಯನ್ನು ಪರಿಗಣಿಸಿ ಅವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ‘ಪ್ರತಿಭಾ ಪುರಸ್ಕಾರ’ ಆಯೋಜನೆ
- ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಪ್ರಾಥಮಿಕ ಹಂತಕ್ಕೆ ಪದೋನ್ನತಿ ಹೊಂದುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ‘ಪದೋನ್ನತಿ ದಿನ’ (Graduation Day) ಆಚರಣೆ
- ಪೂರ್ವ ಪ್ರಾಥಮಿಕ ವಿಭಾಗದ 2024-25ನೆಯ ಸಾಲಿನ ದಾಖಲಾತಿ ಪ್ರಕ್ರಿಯೆಯು ಈಗಾಗಲೇ ಪ್ರಾರಂಭಗೊಂಡಿದೆ.
PRE-KG – 3ರಿಂದ 4 ವರ್ಷ.
LKG – ಮೇ 31 ಕ್ಕೆ 4 ವರ್ಷ ಪೂರ್ಣಗೊಂಡಿರಬೇಕು.
UKG – ಮೇ 31ಕ್ಕೆ 5 ವರ್ಷ ಪೂರ್ಣಗೊಂಡಿರಬೇಕು.
ಆಸಕ್ತ ಪೋಷಕರು ಹೆಚ್ಚಿನ ಮಾಹಿತಿ ಮತ್ತು ದಾಖಲಾತಿಗಾಗಿ ಶಾಲಾ ಕಚೇರಿಯನ್ನು ಸಂಪರ್ಕಿಸಬಹುದು.