ಮಕ್ಕಳ ದಿನಾಚರಣೆ:ವಿದ್ಯಾರ್ಥಿಗಳ ಭದ್ರ ಬುನಾದಿಗೆ ಕನ್ನಡ ಮಾಧ್ಯಮ ಸಹಕಾರಿ- ಶ್ರೀಕಾಂತ್ ಶೆಣೈ

Views: 3
ಕೋಟ: ಜವಾಹರಲಾಲ್ ನೆಹರು ಆಶಯ ಇಡೆರಿಸಲು ಕನ್ನಡ ಮಾಧ್ಯಮ ಶಾಲೆ ಸಹಕಾರಿ ಎಂದು ಕೋಟದ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಣೈ ಹೇಳಿದರು.
ಅವರು ಕೋಟದ ಗಿಳಿಯಾರು ಶ್ರೀ ಶಾಂಭವೀ ವಿದ್ಯಾದಾಯಿನೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಪಂಡಿತ್ ಜವಹರಲಾಲ್ ನೆಹರೂರವರ ಜನ್ಮದಿನೋತ್ಸವದ ಅಂಗವಾಗಿ ಮಕ್ಕಳ ದಿನಾಚರಣೆ ಅಂಗನವಾಡಿ ಮಕ್ಕಳ ಸಮಾಗಮ ಕಾರ್ಯಕ್ರಮದಲ್ಲಿ ಮಾತನಾಡಿ, “ವಿದ್ಯಾರ್ಥಿಗಳ ಭದ್ರ ಬುನಾದಿಗೆ ಕನ್ನಡ ಮಾಧ್ಯಮ ಶಾಲೆಗಳೇ ಮಂಚೂಣಿಗೆ ನಿಂತಿವೆ.ಅಲ್ಲಿ ಎಲ್ಲಾ ತರಹದ ಶಿಕ್ಷಣದ ಮೌಲ್ಯಗಳು ದೊರೆಯುತ್ತದೆ ಕನ್ನಡ ಮಾಧ್ಯವದ ಜೊತೆ ಆಂಗ್ಲ ಮಾಧ್ಯಮ ಸರಿಸಮಾನಾಗಿ ಸ್ವೀಕರಿಸಿ ಯಶಸ್ಸಿನ ದಾರಿಗೆ ಮುನ್ನುಡಿ ಬರೆಯಿರಿ” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಂಡ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ದಿ.ಕಮಲಾಕ್ಷ ಶೆಣೈ ಸ್ಮರಣಾರ್ಥ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮವನ್ನು ನಿವೃತ್ತ ಬ್ಯಾಂಕ್ ಅಧಿಕಾರಿ ಹರ್ತಟ್ಟು ಗೋಪಾಲಕೃಷ್ಣ ಭಟ್ ಉದ್ಘಾಟಿಸಿದರು.
ಮುಖ್ಯ ಅಭ್ಯಾಗತರಾಗಿ ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ, ಶಿವಿನ್ ಗ್ರೂಪ್ ಕೋಟೇಶ್ಚರ ಮುಖ್ಯಸ್ಥ ನರೇಶ್ ಭಟ್,ಉದ್ಯಮಿ ಪ್ರಕಾಶ್ ಜೋಗಿ,ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ರಾಜಾರಾಮ್ ಐತಾಳ್,ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವೀಂದ್ರ ಜೋಗಿ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಮೀನಾಕ್ಷಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ದಿವಾಕರ್ ರಾವ್ ಸ್ವಾಗತಿಸಿದರು. ಶಿಕ್ಷಕಿ ಸರಿತಾ ಪ್ರಸಾದ್ ಬಹುಮಾನ ಪತ್ರ ವಾಚಿಸಿದರು. ಕಾರ್ಯಕ್ರಮವನ್ನು ಶಿಕ್ಚಕಿ ವಿನೋದ ವಿಜಯ್ ನಿರೂಪಿಸಿದರು. ದೈಹಿಕ ಶಿಕ್ಷಕ ರಮೇಶ್ ವಂದಿಸಿದರು. ಕಾರ್ಯಕ್ರಮದ ನಂತರ ಸ್ಥಳೀಯ ಅಂಗನವಾಡಿ,ಶಿಶುಮಂದಿರದ ಪುಟಾಣಿಗಳಿಂದ ನೃತ್ಯ ಕಾರ್ಯಕ್ರಮ ಜರಗಿತು.