ಕರಾವಳಿ

ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ.. ಪೊಲೀಸ್ ಬಿಗಿ ಭದ್ರತೆ..!

Views: 58

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದಾಗಿ ಇ-ಮೇಲ್ ಬೆದರಿಕೆ ಬಂದಿದೆ. ಇದರಿಂದ ವಿಮಾನ ನಿಲ್ದಾಣದಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಉಗ್ರರ ಹೆಸರಿನಲ್ಲಿ ಇ-ಮೇಲ್ ಸಂದೇಶ ಬಂದಿದ್ದು, ಮೂರು ವಿಮಾನದಲ್ಲಿಯು ಸ್ಫೋಟಕ ಇಡಲಾಗಿದೆ. ವಿಮಾನದಲ್ಲಿಯು ಸ್ಫೋಟಕಗಳನ್ನು ಅಡಗಿಸಿ ಇಡಲಾಗಿದೆ. ಕೆಲವೇ ಗಂಟೆಗಳಲ್ಲಿ ಅದು ಸ್ಫೋಟಗೊಳ್ಳಲಿದ್ದು, ದೊಡ್ಡ ಮಟ್ಟದ ರಕ್ತಪಾತವಾಗಲಿದೆ. ಈ ಘಟನೆಯಲ್ಲಿ ಹೆಚ್ಚು ಜನ ಪ್ರಾಣ ಕಳೆದುಕೊಳ್ಳಲಿದ್ದಾರೆ ಎಂದು ಇ-ಮೇಲ್ನಲ್ಲಿ ಉಲ್ಲೇಖ ಮಾಡಲಾಗಿದೆ ಎಂದು ಸಂದೇಶ ಬಂದಿದೆ.

ಬಾಂಬ್ ಬೆದರಿಕೆ ವಿಷಯ ಗೌಪ್ಯವಾಗಿಟ್ಟ ಪೊಲೀಸ್ ಅಧಿಕಾರಿಗಳು

ಇನ್ನು, ಏಪ್ರಿಲ್ 29ರಂದು ವಿಮಾನ ನಿಲ್ದಾಣದ ಪ್ರಾಧಿಕರದ ಇಮೇಲ್ ಸಂದೇಶ ಬಂದಿತ್ತು. ಈ ಬಗ್ಗೆ ವಿಮಾನ ನಿಲ್ದಾಣದ ಅಧಿಕಾರಿಗಳು ಮಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೇಲಧಿಕಾರಿಗಳ ಸೂಚನೆಯಂತೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ನಗರ ಪೊಲೀಸ್ ಕಮಿಷನರ್ ಅಗರ್ವಾಲ್ ಈ ಗಂಭೀರ ಪ್ರಕರಣ ಮುಚ್ಚಿಟ್ಟಿದ್ದಾರೆ. ಸದ್ಯಕ್ಕೆ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

Related Articles

Back to top button
error: Content is protected !!