ಶಿಕ್ಷಣ

ಭಾರತೀಯ ಸೈನ್ಯದ ಶೌರ್ಯ ಸಾಹಸವನ್ನು ಯುವ ಪೀಳಿಗೆಗೆ ತಿಳಿಸುವುದು ನಮ್ಮ ಕರ್ತವ್ಯ : ಪ್ರೊ.ಕೆ.ಉಮೇಶ್ ಶೆಟ್ಟಿ 

Views: 2

ಕುಂದಾಪುರ : ವೀರ ಸೈನಿಕರ ತ್ಯಾಗ ಮತ್ತು ಬಲಿದಾನವನ್ನು ನೆನಪಿಸುವುದರ ಜೊತೆಗೆ ದೇಶದ ಐತಿಹಾಸಿಕ ಗೆಲುವಿಗೆ ಅಭಿನಂದನೆ ಸಲ್ಲಿಸುವ ಉದ್ದೇಶದಿಂದ ಡಾ.ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್.ಸಿ.ಸಿ. ಘಟಕದ ಅಶ್ರಯದಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿಯವರು ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತೀಯ ಸೈನಿಕರು ಅಪ್ರತಿಮ ಯಶಸ್ಸಿನ ವಿಜಯ ಪತಾಕೆ ಹಾರಿಸಿದ ದಿನವನ್ನು ನೆನಪಿಸಿಕೊಳ್ಳುವುದು, ಸಂಭ್ರಮಿಸುವುದು ಮತ್ತು ಭಾರತೀಯ ಸೈನ್ಯದ ಶೌರ್ಯ ಸಾಹಸವನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಗ್ರಂಥಪಾಲಕರಾದ ಶ್ರೀ ಮಹೇಶ್ ನಾಯ್ಕ್ ಪ್ರಾರ್ಥಿಸಿದರು. ವಾಣಿಜ್ಯ ಉಪನ್ಯಾಸಕ ಹಾಗೂ ಎನ್.ಸಿ.ಸಿ. ಕೇರ್ ಟೇಕರ್ ಶ್ರೀ ಶರತ್ ಕುಮಾರ್ ವಂದಿಸಿದರು. ನಿರ್ವಹಣಾ ವಿಭಾಗದ ಉಪನ್ಯಾಸಕಿ ಶ್ರೀಮತಿ ಅವಿತಾ ಕೊರೆಯಾ ನಿರೂಪಿಸಿದರು.

Related Articles

Back to top button