ಶಿಕ್ಷಣ
ಭಟ್ಕಳ: ಕಾಲೇಜು ಶುಲ್ಕ ಕಟ್ಟಲಾಗದೇ ಬಿಸಿಎ ವಿದ್ಯಾರ್ಥಿನಿ ಆತ್ಮಹತ್ಯೆ
Views: 122
ಕನ್ನಡ ಕರಾವಳಿ ಸುದ್ದಿ: ಸಾಲ ಕೊಟ್ಟ ಹಣ ಮರಳಿ ಸಿಗದ ಹಿನ್ನಲೆಯಲ್ಲಿ ಕಾಲೇಜು ಶುಲ್ಕ ಪಾವತಿಸಲಾಗದೇ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆ ಗ್ರಾಮದಲ್ಲಿ ನಡೆದಿದೆ.
ಭಟ್ಕಳದಲ್ಲಿ ಬಿಸಿಎ ಓದುತ್ತಿರುವ ಗಾಯಿತ್ರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಈಕೆಗೆ ಕಾಲೇಜಿಗೆ ಶುಲ್ಕ ಕಟ್ಟಲು ತಂದೆ ನಾಗರಾಜ ಲಚ್ಚಯ್ಯ ನಾಯ್ಕ ಹತ್ತುಸಾವಿರ ಹಣ ನೀಡಿದ್ದರು. ಊರಿನ ಪರಿಚಯಸ್ತ ಸಂತೋಷ ಮಾಧೇದ ನಾಯ್ಕ ಎಂಬಾತ ಈಕೆಯ ಬಳಿ ಹತ್ತುಸಾವಿರ ಷರತ್ತಿನಲ್ಲಿ ನಿಗಧಿ ಸಮಯದಲ್ಲಿ ಮರಳಿಸುವುದಾಗಿ ಸಾಲ ಪಡೆದಿದ್ದನು.ಆದರೆ ಆತ ನಿಗದಿ ಸಮಯಕ್ಕೆ ಹಣ ಮರಳಿ ನೀಡದಿರುವುದರಿಂದ ಶುಲ್ಕ ಕಟ್ಟಲಾಗದೇ ಹಾಲ್ ಟಿಕೇಟ್ ದೊರೆತಿರಲಿಲ್ಲ.ಇದರಿಂದ ಮನನೊಂದ ಗಾಯಿತ್ರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






