ಇತರೆ

ರೇವ್ ಪಾರ್ಟಿ ಮೇಲೆ ದಾಳಿ: ಮಹಿಳೆಯರ ರಕ್ಷಣೆ,ಮೂವರ ಬಂಧನ

Views: 29

ಕನ್ನಡ ಕರಾವಳಿ ಸುದ್ದಿ: ನಗರದ ಐಪಿಎಸ್‌ ಲೇಔಟ್‌ನಲ್ಲಿ ಆಯೋಜಿಸಿದ್ದ ರೇವ್ ಪಾರ್ಟಿ ಅಡ್ಡೆ ಮೇಲೆ ಸಿಸಿಬಿ ಮಹಿಳಾ ಘಟಕ ದಾಳಿ ನಡೆಸಿದ್ದು, ಇದಕ್ಕೆ ಸಂಬಂಧಪಟ್ಟ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ದೀಕ್ಷಿತ್, ವೇದಾಂತ್ ಪಂಡಿತ್ ಹಾಗೂ ಶಂಕ‌ರ್ ಬಂಧಿತ ಆರೋಪಿಗಳು.

ಈ ಮೂವರು ಪಾರ್ಟಿ ಆಯೋಜನೆ ಮಾಡಿದ್ದರು ಎನ್ನಲಾಗಿದೆ. ಇನ್ನು ಈ ಬಗೆಗಿನ ನಿಖರ ಮಾಹಿತಿಯ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ನಿಷೇಧಿತ ಹುಕ್ಕಾ, ಇ-ಸಿಗರೇಟ್ ಹಾಗೂ ಮದ್ಯವನ್ನು ಜಪ್ತಿ ಮಾಡಿ, ಪಾರ್ಟಿಯಲ್ಲಿ ಸಿಲುಕಿದ್ದ ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ರೇವ್ ಪಾರ್ಟಿಯನ್ನು ದೀಕ್ಷಿತ್, ವೇದಾಂತ್ ಪಂಡಿತ್ ಹಾಗೂ ಶಂಕರ್ ಎಂಬ ಮೂವರು ನಗರದ ಎಚ್‌ಎಸ್‌ಆರ್ ಲೇಔಟ್‌ನ 6ನೇ ಸೆಕ್ಟರ್, ಐಪಿಎಸ್ ಲೇಔಟ್‌ನ ಸಿ-9 ವಿಲ್ಲಾದಲ್ಲಿ ಭರ್ಜರಿಯಾಗಿ ಆಯೋಜಿಸಿದ್ದರು. ಇನ್ನು ಇದಕ್ಕೆ 20 ಸಾವಿರ ಬಾಡಿಗೆ ಕಟ್ಟಿ ವಿಲ್ಲಾ ಬುಕ್ ಮಾಡಲಾಗಿತ್ತು.

ಇನ್ನು ಈ ಪಾರ್ಟಿಗೆ ಯುವತಿಯರಿಗೆ 499 ರೂ. ಮತ್ತು ಯುವಕರಿಗೆ 1,099 ರೂ. ರಂತೆ ಸಂಗ್ರಹಿಸಲಾಗುತ್ತಿತ್ತು. ಇವರನ್ನು ಅಮಿಗೋಸ್ ಎಂಬ ಆ್ಯಪ್ ಮೂಲಕ ಆಹ್ವಾನಿಸಲಾಗಿತ್ತು ಎಂದು ತಿಳಿದು ಬಂದಿದೆ.

ಈ ಕುರಿತು ಖಚಿತ ಮಾಹಿತಿ ದೊರೆತ ಮೇರೆಗೆ ರೇವ್ ಪಾರ್ಟಿ ಅಡ್ಡೆ ಮೇಲೆ ದಾಳಿ ನಡೆಸಿದ ಸಿಸಿಬಿ ಮಹಿಳಾ ಘಟಕ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ಇದಕ್ಕೆ ಸಂಬಂಧಪಟ್ಟ ವಿಲ್ಲಾ ಮಾಲೀಕರ ವಿರುದ್ಧ ಹೆಚ್‌ಎಸ್‌ಆರ್ ಲೇಔಟ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದೆ.

Related Articles

Back to top button
error: Content is protected !!